ಮಕ್ಕಳೇ, ಒಳ್ಳೆಯ ಮನುಷ್ಯ ಆಗಬೇಕೆಂದು ಹೇಳಿ: ಖ್ಯಾತ ಮಲಯಾಳಂ ಗಾಯಕಿಯ ಭಾವುಕ ಪೋಸ್ಟ್
ಮಕ್ಕಳೇ, ನಿಮ್ಮನ್ನು ಇವತ್ತು ರಕ್ಷಿಸಿ ಕೊಂಡೊಯ್ಯುತ್ತಿರುವವರು ನಿಮ್ಮ ಧರ್ಮದಲ್ಲಿ ಹುಟ್ಟಿದವರಲ್ಲ. ನಿಮ್ಮ ತಂದೆಯ ರಾಜಕೀಯ ಪಕ್ಷದವರಲ್ಲ, ನಿಮ್ಮ ರಕ್ತವನ್ನು ಹಂಚಿಕೊಂಡು ಹುಟ್ಟಿದವರಲ್ಲ. ನಿಮಗೆ ಸಂಬಂಧಿಸಿ ಅವರು ಯಾರೂ ಅಲ್ಲ. ಇದನ್ನು ನೋಡಿ ನೀವು ಬೆಳೆಯಬೇಕು. ನಿಮ್ಮ ಸಹಜೀವಿಗಳನ್ನು ಪ್ರೀತಿಸಿಕೊಂಡು ನೀವು ಬೆಳೆಯಬೇಕು. ನೀವು ಬೆಳೆಯುತ್ತಾ ಏನಾಗಬೇಕು ಎಂದು ಯಾರಾದರೂ ಪ್ರಶ್ನಿಸಿದರೆ ವೈದ್ಯನಾಗಬೇಕು ಅಥವಾ ಇಂಜಿನಿಯರ್ ಆಗಬೇಕು ಎಂದು ಹೇಳಬೇಡಿ.
ಒಳ್ಳೆಯ ಮನುಷ್ಯ ಆಗಬೇಕೆಂದು ಹೇಳಿ ಎಂದು ಖ್ಯಾತ ಮಲಯಾಳಂ ಗಾಯಕಿ ಸುಜಾತ ಮೋಹನ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಬಾಲಕಿಯನ್ನು ರಕ್ಷಿಸುತ್ತಿರುವ ರಕ್ಷಣಾ ಪಡೆಯ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
ವಯನಾಡಿನ ದುರಂತಕ್ಕೆ ಸಂಬಂಧಿಸಿ ಕೇರಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಸರಕಾರದ ಹೊರತಾಗಿ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಈ ರಕ್ಷಣಾ ಕಾರ್ಯದಲ್ಲಿ ಸೇರಿಕೊಂಡಿದ್ದು ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಎಂದು ವರದಿಗಳು ತಿಳಿಸುತ್ತಿವೆ. ಈ ನಡುವೆಯೇ ಈ ಗಾಯಕಿ ಈ ಪೋಸ್ಟ್ ಹಂಚಿಕೊಂಡಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth