ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ! | ಐಸ್ ಕ್ರೀಮ್ ಗೆ ಕೊರೊನಾ ಬಂದಿದ್ದು ಹೇಗೆ? - Mahanayaka
11:56 AM Friday 22 - November 2024

ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ! | ಐಸ್ ಕ್ರೀಮ್ ಗೆ ಕೊರೊನಾ ಬಂದಿದ್ದು ಹೇಗೆ?

17/01/2021

ಬೀಜಿಂಗ್:  ಕೊರೊನಾ ವೈರಸ್ ನ ಮಾತೃ ಚೀನಾ ಕೊರೊನಾದಿಂದ ಮುಕ್ತವಾಗಿದೆ ಎಂದು ಅಂದುಕೊಳ್ಳುತ್ತಿದ್ದಂತೆಯೇ ಇದೀಗ ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ದೇಶಾದ್ಯಂತ ಮತ್ತೆ ಕೊರೊನಾ ಭೀತಿ ಆರಂಭವಾಗಿದೆ.

ಪೂರ್ವ ಚೀನಾದಲ್ಲಿ ತಯಾರಾದ ಐಸ್‌ ಕ್ರೀಂನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.  ಟಿಯಾಂಜಿನ್‌ ನಲ್ಲಿರುವ  ಡಕಿಯೊಡಾವೊ ಫುಡ್‌ ಕೋ.ಲಿಮಿಟೆಡ್‌ನ ಐಸ್‌ಕ್ರೀಂನಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದೆಯಾಗಿದ್ದು, ಇಲ್ಲಿಂದ ಸುಮಾರು 390 ಪೆಟ್ಟಿಗೆಗಳು ಮಾರಾಟವಾಗಿವೆ. ಇವುಗಳು  ಯಾವ ಪ್ರದೇಶಗಳಲ್ಲಿ ಮಾರಾಟವಾಗಿದೆ, ಯಾರು ಖರೀದಿಸಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುವುದು ಇದೀಗ ಕಷ್ಟಕರವಾಗಿದೆ.

ಇನ್ನೂ 29 ಸಾವಿರ ಐಸ್ ಕ್ರೀಮ್ ಪೆಟ್ಟಿಗೆಗಳು ಮಾರಾಟವಾಗಿಲ್ಲ. ಆ ಪೆಟ್ಟಿಗೆಗಳು ಕೂಡ ಮಾರಾಟವಾಗಿರುತ್ತಿದ್ದರೆ,  ಚೀನಾದಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗುತ್ತಿತ್ತು ಎಂದು ಹೇಳಲಾಗಿದೆ.

ಈ ಪ್ರಕರಣದ ಇನ್ನೊಂದು ವಿಶೇಷ ಏನೆಂದರೆ, ಕೊರೊನಾ ಕೇವಲ ಐಸ್ ಕ್ರೀಮ್ ನಲ್ಲಿ ಮಾತ್ರವೇ ಪತ್ತೆಯಾಗಿದೆ. ಇಲ್ಲಿನ ಸಿಬ್ಬಂದಿಗೆ ಕೊರೊನಾ ಪ್ರರೀಕ್ಷೆ ಮಾಡಲಾಗಿದೆ. ಆದರೆ ಯಾವುದೇ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿಲ್ಲ. ಇದೊಂದು ಅಚ್ಚರಿಯ ಪ್ರಕರಣವಾಗಿದೆ ಎಂದು ಹೇಳಲಾಗಿದೆ.




ಇತ್ತೀಚಿನ ಸುದ್ದಿ