ಚೀನಾಕ್ಕೆ ಒಂದಿಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ | ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟನೆ - Mahanayaka
2:14 PM Wednesday 5 - February 2025

ಚೀನಾಕ್ಕೆ ಒಂದಿಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ | ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟನೆ

13/02/2021

ನವದೆಹಲಿ: ಪೂರ್ವ ಲಡಾಖ್ ನ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶದಲ್ಲಿನ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಚೀನಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಭಾರತದ ಒಂದಿಂಚು ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದ್ದು,  ಸೇನಾ ಸಿಬ್ಬಂದಿಯ ತ್ಯಾಗದಿಂದ ಮಾಡಿದ ಸಾಧನೆಯ ಮೇಲೆ ಶಂಕೆ ಪಡುವುದು ನಿಜಕ್ಕೂ ಯೋಧರಿಗೆ ತೋರುವ ಅಗೌರವ ಎಂದು ಹೇಳಿದೆ.

ಭಾರತದ ಭೂಪಟದಲ್ಲಿರುವ ಭೂ ಭಾಗದ ಪೈಕಿ 43 ಸಾವಿರ ಚದರ ಕಿಲೋ ಮೀಟರ್ 1962ರಿಂದ ಚೀನಾ ಅತಿಕ್ರಮಣದಲ್ಲಿದೆ. ಭಾರತದ ಪರಿಕಲ್ಪನೆಯ ಪ್ರಕಾರ ಎಲ್‌ಎ’ಸಿ ಇರುವುದು ಫಿಂಗರ್ 8ರಿಂದಲೇ ಹೊರತು ಫಿಂಗರ್ 4ರಿಂದಲ್ಲ. ಹಾಗಾಗಿಯೇ ಫಿಂಗರ್ 8ರವರೆಗೂ ನಾವು ಗಸ್ತು ತಿರುಗುವ ಹಕ್ಕನ್ನು ಉಳಿಸಿಕೊಂಡಿದ್ದೇವೆ. ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಎರಡೂ ದೇಶಗಳು ಶಾಶ್ವತ ನೆಲೆ ಹೊಂದಿವೆ. ಭಾರತವು ಫಿಂಗಲ್ 3ರ ಬಳಿ ಇರುವ ಧಾನ್ ಸಿಂಗ್ ಥಾಪಾ ಬಳಿ ನೆಲೆ ಹೊಂದಿದ್ದರೆ, ಚೀನಾದ ನೆಲೆ ಫಿಂಗರ್ 8ರ ಪೂರ್ವಕ್ಕಿದೆ. ಭಾರತದ ಭೂ ಭಾಗ ಫಿಂಗರ್ 4ರವರೆಗೆ ಮಾತ್ರ ಇದೆ ಎಂಬುದೇ ತಪ್ಪು ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.

ಇತ್ತೀಚಿನ ಸುದ್ದಿ