ಕುಸಿತ: ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆಯಲ್ಲಿ ಇಳಿಕೆ
ಚೀನಾದಲ್ಲಿ ಸತತ ಮೂರನೇ ವರ್ಷವೂ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ ಮತ್ತು ಇದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ತ್ವರಿತಗೊಳ್ಳಲಿದೆ ಎಂದು ತಿಳಿದು ಬಂದಿದೆ. ಕಾರ್ಮಿಕರು ಮತ್ತು ಬಳಕೆದಾರರು ಇಬ್ಬರ ಸಂಖ್ಯೆಯೂ ಕಡಿಮೆಯಾಗುತ್ತಿರುವುದು ಚೀನಾದ ಪಾಲಿಗೆ ಆತಂಕಕಾರಿಯಾಗಿದೆ. ಜಗತ್ತಿನ ಎರಡನೇ ಅತಿ ದೊಡ್ಡ ಸಂಪನ್ನ ರಾಷ್ಟ್ರವು ಅಪಾಯದ ಕಡೆಗೆ ಮುಖ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಿರಿಯರ ಆರೈಕೆಗೆ ಮತ್ತು ಉದ್ಯೋಗದಿಂದ ನಿವೃತ್ತಿಯಾದರಿಗೆ ಸೌಲಭ್ಯಗಳನ್ನು ಒದಗಿಸುವುದಕ್ಕೆ ಬೇಕಾಗಿ ಭಾರೀ ಮೊತ್ತವನ್ನು ವಿನಿಯೋಗಿಸಬೇಕಾದ ಸವಾಲನ್ನು ಚೀನಾ ಎದುರಿಸುತ್ತಿದೆ ಎಂದು ವರದಿಯಾಗಿದೆ.
1980 ರಿಂದ 2015 ರವರೆಗೆ ಒಂದು ಮಗು ಎಂಬ ಪಾಲಿಸಿಯನ್ನು ಚೀನಾ ಅತಿ ಕಠಿಣವಾಗಿ ಜನರ ಮೇಲೆ ಹೇರಿತು. ಹಾಗೆಯೇ ನಗರಗಳು ಬೆಳೆದ ಪರಿಣಾಮವಾಗಿ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯತೊಡಗಿತು. ನೆರೆ ರಾಷ್ಟ್ರಗಳಾದ ಜಪಾನ್ ಮತ್ತು ಕೊರಿಯಾದಂತೆಯೇ ಗ್ರಾಮೀಣ ಪ್ರದೇಶದಿಂದ ಭಾರಿ ಸಂಖ್ಯೆಯಲ್ಲಿ ಜನರು ನಗರಕ್ಕೆ ವಲಸೆ ಬಂದರು. ನಗರದಲ್ಲಿ ಜೀವನ ವೆಚ್ಚ ಅಧಿಕವಾಗಿರುವುದರಿಂದ ಹೆಚ್ಚು ಮಕ್ಕಳನ್ನು ಹೊಂದುವುದಕ್ಕೆ ಜನರು ನಿರಾಸಕ್ತಿಯನ್ನು ತೋರತೊಡಗಿದರು.
ವಿದ್ಯಾಭ್ಯಾಸ, ಆರೋಗ್ಯ ವೆಚ್ಚಗಳು ಹೆಚ್ಚಾಗಿರುವುದು ಮತ್ತು ಉದ್ಯೋಗ ಅಭದ್ರತೆ, ಆರ್ಥಿಕ ಮಾಂದ್ಯ ಇತ್ಯಾದಿ ಎಲ್ಲವೂ ಸೇರಿಕೊಂಡು ನಗರ ಪ್ರದೇಶದ ಜನರು ಮಕ್ಕಳನ್ನು ಹೊಂದುವುದನ್ನು ಮುಂದೂಡುತ್ತ ಬರತೊಡಗಿದರು. ಅಲ್ಲದೆ ಒಂದು ಮಗು ಪಾಲಿಸಿಯಿಂದಾಗಿ ಜನರು ಗಂಡು ಮಗುವಿನ ಪರವೇ ಒಲವನ್ನು ಹೊಂದತೊಡಗಿದರು ಇದು ಲಿಂಗಾನುಪಾತದಲ್ಲಿ ಬಾರಿ ವ್ಯತ್ಯಾಸವನ್ನು ಉಂಟುಮಾಡಿದೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj