ಮನೆಯ ಬಾಗಿಲು ಮುರಿದು ಸಾವಿರಾರು ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿಯ ಆಭರಣ ಕಳವು - Mahanayaka
12:17 PM Saturday 14 - December 2024

ಮನೆಯ ಬಾಗಿಲು ಮುರಿದು ಸಾವಿರಾರು ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿಯ ಆಭರಣ ಕಳವು

crime news
18/09/2022

ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಸಾವಿರಾರು ರೂ. ಮೌಲ್ಯದ ಚಿನ್ನ ಬೆಳ್ಳಿಯ ಆಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಲಕ್ಕೊಳ್ಳಿಯ ನಾಗೇಂದ್ರ ಪ್ರಸಾದ್ ಎಂಬವರ ಮನೆಯಲ್ಲಿ ನಡೆದಿದೆ.

ನಾಗೇಂದ್ರ ಪ್ರಸಾದ್ ಅವರು ಕುಟುಂಬ ಸಮೇತರಾಗಿ ಶಂಕರನಾರಾಯಣ ದೇವಸ್ಥಾನಕ್ಕೆ ಪಾರಾಯಣ ಪೂಜೆಗಾಗಿ ತೆರಳಿದ್ದರು. ಪೂಜೆ ಮುಗಿಸಿ ಬಂದು ನೋಡುವಾಗ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಳವು ನಡೆಸಿದ್ದಾರೆ.

ಗೋಡ್ರೇಜ್ ಕಪಾಟಿನ ಬಾಗಿಲನ್ನು ತೆರೆದು ಅದರೊಳಗಿದ್ದ 50 ಸಾವಿರ ನಗದು, 1/2 ಪವನ್ ತೂಕದ ಒಂದು ಜೊತೆ ಒಲೆ, 3ಸಾವಿರ ರೂ. ಬೆಳ್ಳಿಯ ಅರತಿ ತಟ್ಟೆ, 1ಸಾವಿರ ರೂ. ಬೆಳ್ಳಿಯ ಕುಂಕುಮ ಹಾಕುವ ಭರಣಿ, 600 ರೂ. ಮಗುವಿನ ಕಾಲು ಗೆಜ್ಜೆ, 150 ರೂ. ಮಗುವಿನ ಬೆಳ್ಳಿಯ ಬ್ರಾಸ್ ಲೈಟ್ ಹಾಗೂ 500 ರೂ. ಬೆಳ್ಳಿಯ ಲೋಟ ಸಹಿತ ಒಟ್ಟು 61,250 ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ