65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ! - Mahanayaka
7:31 AM Thursday 19 - September 2024

65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ!

chinnakannu
20/10/2021

ತಮಿಳುನಾಡು: ನೋಟ್ ಬ್ಯಾನ್ ನಿಂದ ದೇಶದಲ್ಲಿ ಏನೇನೋ ಸಂಕಷ್ಟಗಳು ದೇಶದಲ್ಲಿ ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ, ನೋಟ್ ಬ್ಯಾನ್ ಆಗಿರುವ ವಿಚಾರವೇ ತಿಳಿಯದ ವೃದ್ಧರೊಬ್ಬರು ಸುಮಾರು  65 ಸಾವಿರ  ರೂಪಾಯಿಗಳ 1 ಸಾವಿರ ಹಾಗೂ 500 ರೂಪಾಯಿಯ ಹಳೆಯ ನೋಟುಗಳನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡ ಘಟನೆ ನಡೆದಿದೆ.

ಕೃಷ್ಣಗಿರಿ ಜಿಲ್ಲೆಯ ಚಿನ್ನಗೌಂಡನೂರು ಗ್ರಾಮದ ಸಣ್ಣಗುಡಿಸಲಿನಲ್ಲಿ ವಾಸಿರುತ್ತಿರುವ ಚಿನ್ನಕಣ್ಣು ಎಂಬವರು ದೃಷ್ಟಿಹೀನರಾಗಿದ್ದಾರೆ. ತಾವು ಭಿಕ್ಷೆ ಬೇಡಿ ದೊರೆತ ಸುಮಾರು 65 ಸಾವಿರ ರೂಪಾಯಿಗಳನ್ನು ಅವರು ತಮ್ಮ ಮನೆಯಲ್ಲಿಟ್ಟಿದ್ದರು.

ಕಣ್ಣು ಕಾಣದ ಪರಿಣಾಮ ಅವರಿಗೆ ಹಣ ಇಟ್ಟಿರುವ ಜಾಗ ಎಲ್ಲಿ ಎನ್ನುವುದೇ ಮರೆತು ಹೋಗಿತ್ತಂತೆ. ಹೀಗಾಗಿ ಅವರಿಗೆ ಹಣ ಸಿಕ್ಕಿರಲಿಲ್ಲ. ಸದ್ಯ ಅವರಿಗೆ ಹಣ ಇಟ್ಟ ಜಾಗ ನೆನಪಾಗಿದ್ದು, ಹೀಗಾಗಿ ಸ್ಥಳೀಯರ ಸಹಕಾರದೊಂದಿಗೆ ಹಳೆಯ ನೋಟುಗಳನ್ನು ಹುಡುಕಿದ್ದಾರೆ. ಬಳಿಕ  ಹಳೆಯ ನೋಟುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಚಲಾವಣೆಯಾಗದ ನೋಟನ್ನು ಬದಲಿಸಿ ಹೊಸ ನೋಟುಗಳನ್ನು ನೀಡುವಂತೆ ಕೃಷ್ಣಗಿರಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.


Provided by

ಕಣ್ಣುಕಳೆದುಕೊಂಡು ಸಂಕಷ್ಟದಲ್ಲಿದ್ದ ಚಿನ್ನಕಣ್ಣು ಅವರಿಗೆ ಇದೀಗ ಹಳೆಯ ನೋಟುಗಳನ್ನು ಬದಲಿಸುವುದೇ ಒಂದು ಸಂಕಷ್ಟವಾಗಿದೆ. ಅವರಿಗೆ ಮತ್ತೆ ಆ ಹಣ ಸಿಗುವುದೇ ಎಂಬ ಬಗ್ಗೆ ಜನರು ನಿರೀಕ್ಷೆಯಲ್ಲಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಕಾಪಾಡಿಕೊಂಡು ಬಂದಿದ್ದ ಹಣವನ್ನು ಬದಲಿಸಿಕೊಡುವಂತೆ ಚಿನ್ನಕಣ್ಣು ಮನವಿ ಮಾಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ನಿಮ್ಮ ಮೆಚ್ಚಿನ ಮಹಾನಾಯಕ ಮಾಧ್ಯಮಕ್ಕೆ 1 ವರ್ಷದ ಸಂಭ್ರಮ

ವೈಯಕ್ತಿಕ ಟೀಕೆಗೆ ತಿರುಗಿದ ರಾಜಕೀಯ ಕೆಸರಾಟ: ಕುಮಾರಸ್ವಾಮಿಯ ಎರಡನೇ ಮದುವೆ ಬಗ್ಗೆ ಬಿಜೆಪಿ ಟಾಂಗ್

ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ: ಸಿಎಂ ಬಸವರಾಜ್ ಬೊಮ್ಮಾಯಿ

45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯ ಮದುವೆ: ಈ ಚಿತ್ರದ ಅಸಲಿ ಕಥೆ ಏನು?

ಸಿದ್ದರಾಮಯ್ಯ ‘ಸಾಬ್ರಕಾ ಸಾತ್, ಸಾಬ್ರಕಾ ವಿಕಾಸ್’ ಅನ್ನುತ್ತಿದ್ದಾರೆ | ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಮೀನು ಸಾಗಾಟದ ಟೆಂಪೋ, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? | ರಮೇಶ್ ಜಾರಕಿಹೊಳಿ

ಇತ್ತೀಚಿನ ಸುದ್ದಿ