ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಿಸಲು ಇವರು ಮಾಡಿದ ಪ್ಲಾನ್ ನೋಡಿ! - Mahanayaka
4:30 PM Thursday 26 - December 2024

ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಿಸಲು ಇವರು ಮಾಡಿದ ಪ್ಲಾನ್ ನೋಡಿ!

25/02/2021

ಮಂಗಳೂರು: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಕಾಸರಗೋಡು ನಿವಾಸಿಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪೇಸ್ಟ್, ಹಾಗೂ ಪೆನ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ಇವರನ್ನು ಬಂಧಿಸಲಾಗಿದೆ.

ಅಬ್ದುಲ್ ರಶೀದ್ ಮತ್ತು ಅಬ್ದುಲ್ ನಿಷಾದ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 61.2 ಲಕ್ಷ ರೂ. ಮೌಲ್ಯದ 1.267 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪೇಸ್ಟ್ ಆಕಾರದಲ್ಲಿ ಚಿನ್ನವನ್ನು ಪ್ಯಾಂಟ್ ಒಳಗೆ ಕವರ್ ಮಾಡಿಕೊಂಡು ಅಬ್ದುಲ್ ರಶೀದ್ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದರೆ, ಇನ್ನೋರ್ವ ಆರೋಪಿ ಅಬ್ದುಲ್ ನಿಷಾದ್ ಪೆನ್ ಮತ್ತು ಲೈಟ್ ಗಳ ಒಳಗೆ ಚಿನ್ನ ಇಟ್ಟು ಸಾಗಿಸಲು ಮುಂದಾಗಿದ್ದಾರೆ. ಆರೋಪಿಗಳನ್ನು ಅಧಿಕಾರಿಗಳು 14 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ