ಚಿನ್ನದ ಮನುಷ್ಯ ಎಂದೇ ಪ್ರಖ್ಯಾತಿ ಹೊಂದಿದ್ದ ಕುಂಜಾಲ್ ಪಟೇಲ್ ಆತ್ಮಹತ್ಯೆ | ಅಷ್ಟಕ್ಕೂ ನಡೆದದ್ದೇನು ಗೊತ್ತಾ? - Mahanayaka
9:36 AM Wednesday 5 - February 2025

ಚಿನ್ನದ ಮನುಷ್ಯ ಎಂದೇ ಪ್ರಖ್ಯಾತಿ ಹೊಂದಿದ್ದ ಕುಂಜಾಲ್ ಪಟೇಲ್ ಆತ್ಮಹತ್ಯೆ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

kunjal patel
22/06/2021

ಅಹ್ಮದಾಬಾದ್: ಮೈತುಂಬಾ ಚಿನ್ನಾಭರಣಗಳನ್ನು ಧರಿಸಿಕೊಂಡು ಸುದ್ದಿಯಾಗಿದ್ದ, ಚಿನ್ನದ ಮನುಷ್ಯ ಎಂದೇ ಕರೆಯಲ್ಪಡುತ್ತಿದ್ದ ಕುಂಜಾಲ್ ಪಟೇಲ್ ಯಾನೆ ಕೆ.ಪಿ.ಪಟೇಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಟುಂಬದ ಜೊತೆಗಿನ ಜಗಳದ ಬಳಿಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ತನ್ನ ಕುತ್ತಿಗೆಯನ್ನು ತಾನೇ ಹಿಸುಕಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಇದು ಹೇಗೆ ಸಾಧ್ಯ ಎನ್ನುವ ಅನುಮಾನಗಳು ಕೂಡ ಮೂಡಿವೆ.

ಚಿನ್ನದ ಮನುಷ್ಯ ಎಂದೇ ಖ್ಯಾತರಾಗಿದ್ದ ಕುಂಜಾಲ್ ಪಟೇಲ್ ಚುನಾವಣೆಗೆ ಕೂಡ ಸ್ಪರ್ಧಿಸಿದ್ದರು. ಕೆಜಿ ಗಟ್ಟಲೆ ಚಿನ್ನವನ್ನು ಮೈಮೇಲೆ ಧರಿಸಿದ್ದ ಫೋಟೋ ವೈರಲ್ ಆದ ಬಳಿಕ ದೇಶಾದ್ಯಂತ ಇವರ ಬಗ್ಗೆ ಜನರು ತಿಳಿದು ಕೊಂಡಿದ್ದರು.

ಕೆಜಿ ಗಟ್ಟಲೆ ಚಿನ್ನಾಭರಣಗಳಿದ್ದರೂ, ಕಷ್ಟವೇ ತಿಳಿಯದ ಮನುಷ್ಯ ಸಾವನ್ನಪ್ಪಿದಾಗ ಅನುಮಾನಗಳು ಸೃಷ್ಟಿಯಾಗುವುದು ಸಹಜ ಆದರೆ ಸದ್ಯ, ಆಕಸ್ಮಿಕ ಸಾವು ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪೋಸ್ಟ್ ಮಾರ್ಟಮ್ ವರದಿಯ ಬಳಿಕ ಸಾವಿನ ಕಾರಣ ಬಯಲಾಗಲಿದೆ.

ಇತ್ತೀಚಿನ ಸುದ್ದಿ