ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಮಾಲಿಕರ ಕೈಸೇರಿಸಿದ ಬೆಳ್ತಂಗಡಿಯ ಉದ್ಯಮಿ ಮುಹಮ್ಮದ್ ಬಶೀರ್ ವಗ್ಗ - Mahanayaka

ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಮಾಲಿಕರ ಕೈಸೇರಿಸಿದ ಬೆಳ್ತಂಗಡಿಯ ಉದ್ಯಮಿ ಮುಹಮ್ಮದ್ ಬಶೀರ್ ವಗ್ಗ

mahammad basheer vagga
13/09/2022

ಬೆಳ್ತಂಗಡಿ: ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಅದರ ವಾರಿಸುದಾರರನ್ನು ಹುಡುಕಿ ಅವರಿಗೆ ಮರಳಿಸುವ ಮೂಲಕ ಬೆಳ್ತಂಗಡಿಯ ಉದ್ಯಮಿ ಮುಹಮ್ಮದ್ ಬಶೀರ್ ವಗ್ಗ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.


Provided by

ನ್ಯಾಯವಾದಿ ಶೈಲೇಶ್ ಠೋಸರ್ ಅವರು ತಿಂಗಳ ಹಿಂದೆ 1.5 ಲಕ್ಷ ರೂ. ಮೌಲ್ಯದ ತನ್ನ ಚಿನ್ನದ ಸರ ಕಳೆದುಕೊಂಡಿದ್ದರು. ಹಲವೆಡೆ ಹುಡುಕಾಟ ನಡೆಸಿದ್ದರೂ ಸರ ಸಿಕ್ಕಿರಲಿಲ್ಲ. ಇದು ಇನ್ನು ಸಿಗುವುದು ಅನುಮಾನ ಎಂದುಕೊಂಡಿದ್ದರು. ಆದರೆ ಈ ಸರ ಮುಹಮ್ಮದ್ ಬಶೀರ್ ಅವರಿಗೆ ಸಿಕ್ಕಿತ್ತು.

ಈ ಸರ ಯಾರದ್ದೆಂದು ತಿಳಿಯದೇ ಇದ್ದುದರಿಂದ ಸಾರ್ವಜನಿಕ ಪ್ರಕಟಣೆ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಸರ ಕಳೆದುಕೊಂಡವರು ಮೆಸೇಜ್ ಹಾಕುತ್ತಾರೆಯೇ ಎಂದು ಒಂದು ತಿಂಗಳು ಕಾದುಕುಳಿತಿದ್ದರು. ಆದರೆ ಯಾವುದೇ ಮಾಹಿತಿ ಲಭಿಸದ್ದರಿಂದ ಬಶೀರ್ ಅವರೇ ಸ್ವಂತ ಖರ್ಚಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಸರ ಬಿದ್ದು ಸಿಕ್ಕಿದೆ ಎಂದು ಸಾರ್ವಜನಿಕ ಪ್ರಕಟಣೆ ನೀಡಿದ್ದರು.


Provided by

ಇದನ್ನು ಅರಿತ ಶೈಲೇಶ್ ಅವರ ಮಿತ್ರ ನಾಮದೇವ ರಾವ್ ಅವರು, ಶೈಲೇಶ್ ಅವರಿಗೆ ಮಾಹಿತಿ ನೀಡಿದಂತೆ ಸದ್ರಿ ನಂಬರನ್ನು ಸಂಪರ್ಕಿಸಿ, ಬಳಿಕ ಪರಿಶೀಲಿಸಿದಾಗ ಅದು ಸರ ಶೈಲೇಶ್ ಅವರದ್ದೇ ಎಂದು ರುಜುವಾತಾಯುತು. ಆ ಹಿನ್ನೆಲೆಯಲ್ಲಿ ಮುಹಮ್ಮದ್ ಬಶೀರ್ ಅವರು ಶೈಲೇಶ್ ಅವರಿಗೆ ಸರವನ್ನು ಹಸ್ತಾಂತರಿಸಿದರು.

ಬಶೀರ್ ಉಜಿರೆಯಲ್ಲಿ ಇ.ಕೆ. ಬೀಡೀಸ್ ಉದ್ಯಮ ನಡೆಸುತ್ತಿದ್ದು, ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷರಾಗಿ, ಬೆಳ್ತಂಗಡಿ ದಾರುಸ್ಸಲಾಂ ದಅವಾ ಸೆಂಟರ್ ನ ಸ್ಥಾಪಕ ಕಾರ್ಯದರ್ಶಿಯಾಗಿ ಗುರುತಿಸಿಕೊಂಡವರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ