ನಮ್ಮನ್ನು ಅಗಲಿದ ಚಿರು, ಸಂಚಾರಿ, ಪುನೀತ್ ಈ ಮೂವರ ಜನ್ಮ ದಿನಾಂಕವೂ ಒಂದೆ!
ಸಿನಿಡೆಸ್ಕ್: ಇಡೀ ಕರ್ನಾಟಕವನ್ನೇ ಕಣ್ಣೀರಿನಲ್ಲಿ ಮುಳುಗಿಸಿದ ಈ ಮೂವರು ಯುವ ನಟರ ಜನ್ಮ ದಿನಾಂಕ ಕೂಡ ಒಂದೇ ಆಗಿದ್ದು, ಈ ವೃತ್ತಿ ಜೀವನವನ್ನು ಮೀರಿಸಿದ ಈ ಮೂವರು ನಟರಿಗೂ ಸಾಮ್ಯತೆ ಇದೆ. ಈ ಮೂವರ ಸಾವಿನ ಸಂದರ್ಭದಲ್ಲಿಯೂ ಕರ್ನಾಟಕ ಕೇಳಿದ ಪ್ರಶ್ನೆ ಒಂದೇ, “ಈ ಸಾವು ನ್ಯಾಯವೇ?”
ಮೊದಲಿಗೆ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ಬಲಿಯಾದರು. ಆ ಬಳಿಕ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಪಘಾತದಿಂದ ನಿಧನರಾದರು. ಇದೀಗ ಲಕ್ಷಾಂತರ ಅಭಿಮಾನಿಗಳ ಬಳಗ ಹೊಂದಿರುವ ಪುನೀತ್ ರಾಜ್ ಕುಮಾರ್ ನಿಧನ ಹೊಂದಿದ್ದಾರೆ.
ಈ ಮೂವರು ನಟರಲ್ಲಿಯೂ ಇದ್ದ ಸಾಮಾನ್ಯ ಸಾಮ್ಯತೆ ಎಂದರೆ, ಎಲ್ಲರೂ ನಗುಮುಖದ ವ್ಯಕ್ತಿಗಳಾಗಿದ್ದರು. ಜನರ ಜೊತೆಗೆ ಬೆರೆಯುವ ಗುಣದವರಾಗಿದ್ದರು. ಮೃಧು ಸ್ವಭಾವ, ವಿನಯ, ಪ್ರೀತಿ ಹೀಗೆ ಈ ಮೂವರು ನಟರ ವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ, ಬದುಕಿದರೆ ಹೀಗೆ ಬದುಕಬೇಕು ಎನ್ನುವಂತಿತ್ತು.
ಅಕ್ಟೋಬರ್ 17ರಂದು ಚಿರಂಜೀವಿ ಸರ್ಜಾ ಅವರ ಜನ್ಮ ದಿನ. ಜುಲೈ 17ರಂದು ಸಂಚಾರಿ ವಿಜಯ್ ಹುಟ್ಟಿದ ದಿನಾಂಕವಾಗಿದೆ. ಮಾರ್ಚ್ 17 ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನವಾಗಿದೆ. ಈ ಮೂವರು ಕೂಡ ಒಬ್ಬರ ಹಿಂದೊಬ್ಬರಂತೆ ನಿಧನರಾಗುವ ಮೂಲಕ ಕರ್ನಾಟಕದ ಜನತೆಯ ಕಣ್ಣುಗಳನ್ನು ಒದ್ದೆಯಾಗಿಸಿದ್ದಾರೆ.
ಕಳೆದ ಜೂನ್ ನಲ್ಲಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. ಈ ನೋವು ಮಾಸುವ ಮೊದಲೇ ಜೂನ್ 15ರಂದು ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಇದರ ಬೆನ್ನಲ್ಲೇ ಇದೀಗ ಯಾರೂ ನಿರೀಕ್ಷಿಸದೇ ಇರುವಂತಹ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸಿದ್ದು, ಪುನೀತ್ ರಾಜ್ ಕುಮಾರ್ ಅವರು ಕೂಡ ನಿಧನರಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka