ಕ್ರೈಸ್ಟ್ ಸಿಎಂಐ ಪಬ್ಲಿಕ್ ಶಾಲೆಯ ವಿರುದ್ಧ ಹಿಂಜಾವೇ ಮತಾಂತರ ಆರೋಪ!
ಚಾಮರಾಜನಗರ: ಹಿಜಾಬ್ ಬಳಿಕ ತಣ್ಣಗಿದ್ದ ಧಾರ್ಮಿಕ ಸಂಘರ್ಷ ಮತ್ತೇ ಗುಂಡ್ಲುಪೇಟೆಯಲ್ಲಿ ಆರಂಭಗೊಂಡಿದ್ದು ಶಾಲೆಯ ವಿರುದ್ಧ ಹಿಂದೂ ಜಾಗರಣ ವೇದಿಕೆ ಮತಾಂತರ ಆರೋಪ ಮಾಡಿದೆ.
ಗುಂಡ್ಲುಪೇಟೆ ಪಟ್ಟಣದಲ್ಲಿರುವ ಕ್ರೈಸ್ಟ್ ಸಿಎಂಐ ಪಬ್ಲಿಕ್ ಶಾಲೆಯ ವಿರುದ್ಧ ಹಿಂಜಾವೇ ಮತಾಂತರಕ್ಕೆ ಪ್ರೇರೆಪಿಸುತ್ತಿದ್ದಾರೆಂದು ಆರೋಪಿಸಿ ತಹಸಿಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರಗೀತೆ ಹಾಡಿಸದೇ ಕೇವಲ ಏಸು ಗೀತೆ ಹಾಡಿಸುತ್ತಾರೆ, ತಿಲಕ-ಕುಂಕುಮಕ್ಕೆ ನಿರ್ಬಂಧ ಹೇರಿದ್ದಾರೆ, ಕ್ರಿಸ್ತನನ್ನು ಪೂಜಿಸಿ ಎಂದು ಹೇಳಿಕೊಡಲಿದ್ದು ರಾಷ್ಟ್ರನಾಯಕ ಫೋಟೋ ಹಾಕದೇ ಏಸು ಫೋಟೋ ಮಾತ್ರ ಶಾಲೆಯಲ್ಲಿ ಹಾಕಿದ್ದಾರೆ ಎಂದು ಹಿಂಜಾವೇ ಆರೋಪಿಸಿದೆ.
ಶಾಲೆ ನಡೆಸುವ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರ ರವಾನಿಸಿದ್ದಾರೆ.
ಏನಿದು ತಿಕ್ಕಾಟ: ಸಂಕ್ರಾಂತಿ ಹಬ್ಬದ ದಿನ ಶಾಲೆ ತೆರೆದಿದ್ದರಿಂದ ಮತ್ತು ಶಾಲೆಯಲ್ಲಿ ರಾಷ್ಟ್ರ ನಾಯಕರ ಭಾವಚಿತ್ರ ಹಿಡದೆ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ವಿಚಾರ ಭಾನುವಾರ ಪೊಲೀಸ್ ಠಾಣೆಯ ಮೆಟ್ಟಿಲೆರಿತ್ತು.
ಹಬ್ಬದ ನ ದಿನವಾದ ಭಾನುವಾರ ಕ್ರೈಸ್ಟ್ ಸಿಎಂಐ ಶಾಲೆಯ ಮಕ್ಕಳಿಗೆ ರಜೆ ನೀಡದೆ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆಸಿಕೊಂಡಿದ್ದಾರೆ. ಈ ವಿಚಾರ ಹಿಂದುಜಾಗರಣಾ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯವರು ಶಾಲೆಗೆ ಭೇಟಿ ನೀಡಿ ಅಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯಲ್ಲಿ ರಾಷ್ಟ್ರ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ವನ್ನು ಬೀರುವಿನಲ್ಲಿರಿಸಿ ಏಸು ಕ್ರಿಸ್ತನ ಪೋಟೋ ಮಾತ್ರ ಇರಿಸಿದ್ದರು ಎಂದು ದಲಿತ ಸಂಘಟನೆ ಮುತ್ತಣ್ಣ ಆರೋಪಿಸಿದ್ದರು.
ಶಾಲಾ ವಾರ್ಷಿಕೋತ್ಸವ ಸಂಬಂಧ ಡ್ಯಾನ್ಸ್ ಪ್ರಾಕ್ಟೀಸ್ ಗೆ ಮಕ್ಕಳನ್ನು ಭಾನುವಾರ ಕರೆಸಿಕೊಳ್ಳುತ್ತೇವೆ ಎಂದು ಶಾಲಾ ಶಿಕ್ಷಕರು ಹೇಳಿದ್ದರು, ರಜಾ ದಿನ ತರಗತಿ ನಡೆಸುವ ಬಗ್ಗೆ ಹಾಗೂ ಇನ್ನಿತರ ಸಂಬಂಧ ಅನುಮತಿ ಪಡೆದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಹಗ್ಗ ಜಗ್ಗಾಟ ಮತ್ತೆಲ್ಲಿವರೆಗೆ ಮುಟ್ಟುವುದೋ ಕಾದು ನೋಡಬೇಕಿದೆ. ಪರೀಕ್ಷಾ ವೇಳೆ ಮತ್ತೊಂದು ಸಂಕಟ ಶಿಕ್ಷಣ ಇಲಾಖೆಗೆ ಎದುರಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw