ಚುಚ್ಚು ಮದ್ದು ಪಡೆದ ಬಳಿಕ ನಾಲ್ಕೂವರೆ ವರ್ಷದ ಮಗು ದಾರುಣ ಸಾವು | ಶುಶ್ರೂಷಕಿಯರ ನಿರ್ಲಕ್ಷ್ಯದ ಆರೋಪ!
ಕಾರ್ಕಳ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚು ಮದ್ದು ನೀಡಿದ ಬಳಿಕ ನಾಲ್ಕೂವರೆ ತಿಂಗಳ ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ಕಾರ್ಕಳದಲ್ಲಿ ನಡೆದಿದ್ದು, ಘಟನೆ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉದಯ ಶೆಟ್ಟಿ ಹಾಗೂ ವಾಣಿಶ್ರೀ ದಂಪತಿಯ ನಾಲ್ಕೂವರೆ ತಿಂಗಳ ಶ್ರೀಯಾನ್ ಮೃತ ಮಗು ವಾಗಿದ್ದು, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಆರೋಗ್ಯ ಕೇಂದ್ರದ ಶುಶ್ರೂಕಿಯರು ಎ.7ರಂದು ಮಧ್ಯಾಹ್ನ 12.30 ಗಂಟೆಗೆ ಮಗುವಿಗೆ ತಿಂಗಳ ಚುಚ್ಚು ಮದ್ದು ನೀಡಿದ್ದಾ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚುಚ್ಚು ಮದ್ದು ನೀಡಿದ ಬಳಿಕ ಶ್ರೀಯಾನ್ ನನ್ನು ಮನೆಗೆ ಕರೆದುಕೊಂಡು ಬಂದಿದ್ದು, ಮಧ್ಯಾಹ್ನ 2:30 ಗಂಟೆಯಿಂದ 3ಗಂಟೆಯ ಅವಧಿಯಲ್ಲಿ ಶ್ರೀಯಾನ್ ಬಾಯಿಯಲ್ಲಿ ನೊರೆ ಬಂದಿದ್ದಲ್ಲದೆ ತೀವ್ರ ಅಸ್ವಸ್ಥಗೊಂಡಿದ್ದ ಎಂದು ದಂಪತಿ ತಿಳಿಸಿದ್ದಾರೆ.
ತಕ್ಷಣವೇ ಮಗುವನ್ನು ಕಾರ್ಕಳ ರೋಟರಿ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ, ಸಂಜೆ 6:50ಕ್ಕೆ ಮಗು ಮೃತ ಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯವರು ನೀಡಿದ ಚುಚ್ಚು ಮದ್ದಿನ ಅಡ್ಡಪರಿಣಾಮದಿಂದ ಮಗು ಮೃತಪಟ್ಟಿದೆ ಎಂದು ದೂರು ದಾಖಲಾಗಿದೆ.