ಚೂಡಿದಾರ್, ಮಾಸ್ಕ್ ಧರಿಸಿ ಬ್ಯೂಟಿಪಾರ್ಲರ್ ಒಳಗೆ ಹೋದ ವಿಕೃತ ವ್ಯಕ್ತಿ!
ಗಾಂಧಿನಗರ: ಚೂಡಿದಾರ, ಮಾಸ್ಕ್ ಧರಿಸಿ ಬ್ಯೂಟಿಪಾರ್ಲರ್ ಗೆ ಬಂದಿದ್ದ ವ್ಯಕ್ತಿಯೋರ್ವ ಬ್ಯೂಟಿಪಾರ್ಲರ್ ಮಾಲಕಿಗೆ ಕಿರುಕುಳ ನೀಡಿದ ಆತಂಕಕಾರಿ ಘಟನೆ ನಗರದಲ್ಲಿ ನಡೆದಿದೆ.
ಚೂಡಿದಾರ ಹಾಗೂ ಮಾಸ್ಕ್ ಧರಿಸಿ ಮಹಿಳೆಯಂತೆ ಬ್ಯೂಟಿಪಾರ್ಲರ್ ಒಳಗೆ ಬಂದಿದ್ದ ಆತನನ್ನು ಮಹಿಳೆ ಎಂದು ತಿಳಿದು ಏನು ಮಾಡಬೇಕು ಎಂದು ಮಾಲಕಿ ಕೇಳಿದ್ದು, ಈ ವೇಳೆ ಐಬ್ರೋ ಮಾಡುವಂತೆ ಆತ ಕೈಸನ್ನೆ ಮಾಡಿದ್ದಾನೆ.
ಸರಿ ಕುಳಿತುಕೊಳ್ಳಿ ಎಂದು ಮಾಲಕಿ ಹೇಳಿದ್ದು, ಈ ವೇಳೆ ನನಗೆ ಫೇಷಿಯಲ್ ಕೂಡ ಮಾಡಬೇಕಿತ್ತು, ಮಾಡಿಸುತ್ತೀರಾ ಎಂದು ಆತ ಕೇಳಿದ್ದು, ಈ ವೇಳೆ ಮಾಲಕಿಯು ಅದು ಪುರುಷ ಧ್ವನಿ ಎಂದು ಕಂಡು ಹಿಡಿದ್ದಾರೆ. ತಕ್ಷಣವೇ ಅಲ್ಲಿಂದ ಹೊರಟು ಹೋಗುವಂತೆ ಆತನನ್ನು ಗದರಿದ್ದಾರೆ. ಈ ವೇಳೆ ಆತ, ಮಾಲಕಿಯನ್ನು ಹತ್ತಿರ ಎಳೆದು ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಪತಿಯನ್ನು ಕಳೆದುಕೊಂಡು ತನ್ನ 12 ವರ್ಷದ ಮಗನೊಂದಿಗೆ ವಾಸಿಸುತ್ತಿರುವ ಸಂತ್ರಸ್ತೆ ಬ್ಯೂಟಿಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಇದನ್ನು ಗಮನಿಸಿದ ಕಿಡಿಗೇಡಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ನಿಯತ್ತಿನಿಂದ ಬದುಕುತ್ತಿರುವ ಜನರನ್ನೂ ನೆಮ್ಮದಿಯಿಂದ ಬದುಕಲು ಬಿಡದ ಇಂತಹ ಕಾಮುಕರು ಸಾರ್ವಜನಿಕ ಜೀವನದಲ್ಲಿ ಬದುಕಲು ಯೋಗ್ಯತೆ ಇಲ್ಲದವರು. ಇಂತಹವರನ್ನು ಶಾಶ್ವತವಾಗಿ ಜೈಲಿನಲ್ಲಿಡುವಂತಹ ಕಾನೂನು ತರಬೇಕು ಎಂಬ ಆಕ್ರೋಶದ ಮಾತುಗಳು ಕೇಳಿ ಬಂದಿವೆ.