ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಪ್ರಿಯಾಂಕಾ ಗಾಂಧಿ: ಕಾರಣ ಏನು ಗೊತ್ತಾ?
ನವದೆಹಲಿ: ಉದ್ಯಮಿ ರಾಬರ್ಟ್ ವಾದ್ರಾ ಅವರಿಗೆ ಕೋವಿಡ್ -19 ಪಾಸಿಟಿವ್ ಕಂಡು ಬಂದ ಕಾರಣ ಪತ್ನಿ ಪ್ರಿಯಾಂಕಾ ಗಾಂಧಿ ಐಸೋಲೇಷನ್ ನಲ್ಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರು ಇನ್ನು ಚುನಾವಣಾ ಪ್ರಚಾರದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ, ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿದ್ದರು. ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ವ್ಯಾಪಕವಾಗಿ ಪಾಲ್ಗೊಂಡಿದ್ದರು. ಇದೀಗ ರಾಬರ್ಟ್ ವಾದ್ರಾ ಅವರ ಕೋವಿಡ್ ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ಕೂಡ ಐಸೋಲೇಷನ್‌ಗೆ ಒಳಗಾಗಿದ್ದಾರೆ.
‘ಇತ್ತೀಚೆಗೆ ಕೊರೊನಾ ಸೋಂಕಿಗೆ ತೆರೆದುಕೊಂಡ ಕಾರಣದಿಂದ ನನ್ನ ಅಸ್ಸಾಂ ಪ್ರವಾಸವನ್ನು ರದ್ದುಗೊಳಿಸಬೇಕಾಗಿದೆ. ನಿನ್ನೆ ಬಂದ ವರದಿಯಲ್ಲಿ ನೆಗೆಟಿವ್ ಎಂದು ತಿಳಿದುಬಂದಿದೆ. ಆದರೆ ವೈದ್ಯರ ಸಲಹೆಯಂತೆ ನಾನು ಇನ್ನು ಕೆಲವು ದಿನಗಳವರೆಗೆ ಐಸೋಲೇಷನ್‌ನಲ್ಲಿ ಇರಲಿದ್ದೇನೆ. ಈ ಅಡಚಣೆಗಾಗಿ ಎಲ್ಲರಿಗೂ ಕ್ಷಮೆ ಕೋರುತ್ತೇನೆ. ಕಾಂಗ್ರೆಸ್‌ನ ಗೆಲುವಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಪ್ರಿಯಾಂಕಾ ವಿಡಿಯೋ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.