ನಾನು ಚುನಾವಣೆಯಲ್ಲಿ ಸೋಲಲು ಯೋಗೇಶ್ವರ್, ಎನ್.ಆರ್.ಸಂತೋಷ್ ಕಾರಣ | ಹೆಚ್.ವಿಶ್ವನಾಥ್ - Mahanayaka
4:20 PM Wednesday 5 - February 2025

ನಾನು ಚುನಾವಣೆಯಲ್ಲಿ ಸೋಲಲು ಯೋಗೇಶ್ವರ್, ಎನ್.ಆರ್.ಸಂತೋಷ್ ಕಾರಣ | ಹೆಚ್.ವಿಶ್ವನಾಥ್

01/12/2020

ಬೆಂಗಳೂರು: ನಾನು ಚುನಾವಣೆಯಲ್ಲಿ ಸೋಲಲು ಸಿ.ಪಿ.ಯೋಗೇಶ್ವರ್ ಹಾಗೂ ಎನ್.ಆರ್.ಸಂತೋಷ್ ಕಾರಣ ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ಅವರು ಕಿಡಿಕಾರಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಈ ವಿಚಾರ ತಿಳಿಸಿದ ಅವರು, ಹುಣಸೂರು ಕ್ಷೇತ್ರದಲ್ಲಿ ನಾನು ಸೋಲಲು ಯೋಗೇಶ್ವರ್ ಕಾರಣವಾಗಿದ್ದಾರೆ. ಚುನಾವಣೆಗೆ ಮುಂಚಿತವಾಗಿಯೇ ಸೀರೆ ಹಂಚಿ ಅವರು ನನ್ನ ಇಮೇಜ್ ಡ್ಯಾಮೇಜ್ ಮಾಡಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ನನ್ನ ಚುನಾವಣಾ ಖರ್ಚಿಗೆಂದು ಬಂದಿದ್ದ ದೊಡ್ಡಮಟ್ಟದ ಹಣವನ್ನು ಸಿ.ಪಿ.ಯೋಗೇಶ್ವರ್ ಹಾಗೂ ಎನ್.ಆರ್.ಸಂತೋಷ್ ಪಡೆದುಕೊಂಡಿದ್ದರು. ಹೀಗಾಗಿ ನಾನು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ