ಚೂರಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನ: ಆರೋಪಿ ವಶಕ್ಕೆ - Mahanayaka

ಚೂರಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನ: ಆರೋಪಿ ವಶಕ್ಕೆ

bantwalla crime
02/03/2022

ಬಂಟ್ವಾಳ: ಬಿ.ಸಿ.ರೋಡ್ ಬಳಿಯ ಮಿತ್ತಬೈಲು ಕೇಂದ್ರ ಜುಮಾ ಮಸೀದಿಯೊಳಗೆ ಚೂರಿ ಹಿಡಿದುಕೊಂಡು ನುಗ್ಗಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಆರೋಪಿಯನ್ನು ಬಾಬು ಪೂಜಾರಿ (60) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಮಸೀದಿ ಬಳಿ ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಆತ ಮಸೀದಿ ಬಳಿ ವಾಹನ ನಿಲ್ಲಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದಲ್ಲದೆ, ಮಸೀದಿಯೊಳಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದ್ದಾನೆ.

ಈ ವೇಳೆ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ ಆತ ತಾನು ಮಡಿಕೇರಿಯಿಂದ ಬಂದಿದ್ದು, ಪ್ರಾರ್ಥನೆ ಮಾಡಲು ಒಬ್ಬ ಧರ್ಮಗುರು ಬೇಕು ಎಂದಿದ್ದಾನೆ. ಆತನ ದ್ವಿಚಕ್ರ ವಾಹನ ಪರಿಶೀಲಿಸಿದಾಗ ಅದರಲ್ಲಿ ಚಾಕು ಇರುವುದು ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಮಸೀದಿ ಆಡಳಿತ ಕಮಿಟಿಗೆ ಮಾಹಿತಿ ನೀಡಿದ್ದು, ಆಡಳಿತ ಕಮಿಟಿಯವರು ವಿಚಾರಿಸಿದಾಗ ಆತ ಕಲ್ಲಡ್ಕ ನಿವಾಸಿ ಬಾಬು ಎಂಬುದಾಗಿ ಮಾಹಿತಿ ಲಭಿಸಿದೆ.

ಬಳಿಕ ಆತನನ್ನು ಬಂಟ್ವಾಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಆರೋಪಿಯ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ಯುದ್ದಪೀಡಿತ ರಷ್ಯಾ ವಿರುದ್ಧ ಸಂಘರ್ಷಕ್ಕೆ ಇಳಿಯುವುದಿಲ್ಲ: ಜೋ ಬೈಡನ್‌

ಉಕ್ರೇನ್ ಮೇಲೆ ರಷ್ಯಾ ದಾಳಿ: ಕನ್ನಡಿಗ ನವೀನ್ ಮೃತದೇಹ ಪತ್ತೆ

ಭೀಕರ ಅಪಘಾತ; ತಂದೆ -ಮಗಳು ಸ್ಥಳದಲ್ಲೇ ಸಾವು

ಲಾಡ್ಜ್ ​ಗಳಲ್ಲಿ ಹೈಟೆಕ್​ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ

 

ಇತ್ತೀಚಿನ ಸುದ್ದಿ