ನಾಗರಿಕ ವಿಚಾರಣೆ ವೇದಿಕೆ ಮತ್ತು ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ: ಪದಾಧಿಕಾರಿಗಳ ನೇಮಕ
ಸಿಂಧನೂರು: ಇಂದು CITIZEN ENQUIRY COUNCIL &CEC TRUST ನಾಗರಿಕ ವಿಚಾರಣೆ ವೇದಿಕೆ ಮತ್ತು ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ ಎಂಬ ಸಂಸ್ಥೆ ಸಿಂಧನೂರು ತಾಲೂಕು ಘಟಕದಲ್ಲಿ ಪದಾಧಿಕಾರಿಗಳ ನೇಮಕ ಮತ್ತು ಕಿರು ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಯೋಧ ವೀರಭದ್ರಯ್ಯ ಸಗರಮಠ ಇವರನ್ನು ಸಿಂಧನೂರು ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಕೊಡಲಾಯಿತು. ಸಿಂಧನೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಹಾಗೂ ಸಿಂಧನೂರು ತಾಲೂಕು ಕಾನೂನು ಸಲಹೆಗಾರರನ್ನಾಗಿ ಚಂದ್ರಶೇಖರ ತುರುವಿಹಾಳ್ ವಕೀಲರನ್ನು ನೇಮಿಸಿ ಆದೇಶ ಹೊರಡಿಸಲಾಯಿತು. ಜೊತೆಗೆ ಸಿಂಧನೂರು ತಾಲೂಕಿನ ಕಾರ್ಯದರ್ಶಿಯಾಗಿ ಹಾಗೂ ಕಾನೂನು ಸಲಹೆಗಾರರನ್ನಾಗಿ ರಾಮಣ್ಣ ವಕೀಲರನ್ನು ನೇಮಿಸಲಾಯಿತು.
ಸಂಸ್ಥೆಯು ಸಂಪೂರ್ಣವಾಗಿ ಭ್ರಷ್ಟಾಚಾರ ನಿರ್ಮೂಲನೆಯ ವಿಶೇಷವಾದ ರಾಷ್ಟ್ರೀಯ ಸಂಸ್ಥೆ(NGO TRUST) ಆಗಿರುವುದರಿಂದ ಮುಖ್ಯವಾಗಿ ವಕೀಲರನ್ನು ಮತ್ತು ಮಾಜಿಯೋಧರಿಗೆ ಆದ್ಯತೆ ಕೊಟ್ಟಿದ್ದು .ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಮಾಡಲಾಯಿತು.
ವರದಿ: ಮಲ್ಲನಗೌಡ, ಗೋರೆಬಾಳ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಿದ್ದರಾಮಯ್ಯ ರೋಹಿತ್ ಚಕ್ರ ತೀರ್ಥನ ಬಂಧನಕ್ಕೆ ಕರೆ ನೀಡಿದ್ದು ಅಸಂವಿಧಾನಿಕ: ನಟ ಚೇತನ್
ಗುರುದ್ವಾರದಲ್ಲಿ ಸ್ಫೋಟ: ಇಬ್ಬರು ಸಾವು, ಹಲವರನ್ನು ಒತ್ತೆಯಾಳಾಗಿಸಿದ ಉಗ್ರರು
ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದವರ ಮಾಹಿತಿ ನೀಡಿದವರಿಗೆ 500 ರೂ. ಬಹುಮಾನ!
ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದ ಒಂಟಿ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!