ಹೊಗೆನಕಲ್ ನಲ್ಲಿ ಪ್ರವಾಸಿಗರು, ತೆಪ್ಪ ನಡೆಸುವತನ ಮಧ್ಯೆ ಹೊಡೆದಾಟ
ಚಾಮರಾಜನಗರ: ದರ ದುಪ್ಪಟ್ಟು ವಸೂಲಿಯಿಂದ ತೆಪ್ಪ ನಡೆಸುವವರು ಹಾಗೂ ಪ್ರವಾಸಿಗರು ಹೊಡೆದಾಡಿಕೊಂಡಿರುವ ಘಟನೆ ಪ್ರಸಿದ್ಧ ಪ್ರವಾಸಿತಾಣವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ.
ಹೊಗೆನಕಲ್ ಜಲಪಾತವು ತಮಿಳುನಾಡು ಹಾಗೂ ಕರ್ನಾಟಕ ಎರಡೂ ಭಾಗದಲ್ಲೂ ಹರಡಿಕೊಂಡಿದ್ದು ಗಲಾಟೆ ನಡೆದಿರುವುದು ತಮಿಳುನಾಡು ಭಾಗದಲ್ಲಾಗಿದ್ದು ಮಾರಾಮಾರಿ ನಡೆಸಿಕೊಂಡಿದ್ದಾರೆ.
ತಮಿಳುನಾಡು ಸರ್ಕಾರ ತೆಪ್ಪ ಸವಾರಿಗೆ 750 ರೂ. ನಿಗದಿ ಮಾಡಿದ್ದರೇ ಅಲ್ಲಿನ ಸಿಬ್ಬಂದಿ 4 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ, ನದಿಯ ಒಂದು ಭಾಗಕ್ಕೆ ಕರೆದೊಯ್ದು ಹಣ ಕೊಡದಿದ್ದರೇ ವಾಪಸ್ ಬಿಡುವುದಿಲ್ಲ ಎಂದು ಕ್ಯಾತೆ ತೆಗೆದಾಗ ಮಾತಿನ ಚಕಮಕಿ ನಡೆದು ಹೊಡದಾಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw