ಟೀಚರ್ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಬಂದ 2ನೇ ತರಗತಿಯ ವಿದ್ಯಾರ್ಥಿ - Mahanayaka

ಟೀಚರ್ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಬಂದ 2ನೇ ತರಗತಿಯ ವಿದ್ಯಾರ್ಥಿ

student
06/03/2022

ತೆಲಂಗಾಣ: ಟೀಚರ್ ನನಗೆ ಹೊಡೆಯುತ್ತಿದ್ದಾರೆ.  ಅವರನ್ನು ಬಂಧಿಸಿ ಎಂದು 2ನೇ ತರಗತಿಯ ವಿದ್ಯಾರ್ಥಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ತೆಲಂಗಾಣದ ಮೆಹಬೂಬ್ ನಗರದ ಬಯ್ಯಾರಾಮ್ ಪ್ರದೇಶದ ಖಾಸಗಿ ಶಾಲೆ 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್ ಎಂಬಾತ ಪೊಲೀಸ್ ಠಾಣೆಗೆ ಆಗಮಿಸಿದ್ದು, ಈ ವೇಳೆ ಮಹಿಳಾ ಇನ್ಸ್ ಪೆಕ್ಟರ್, ಇಲ್ಲಗೆ ಯಾಕೆ ಬಂದಿದ್ದಿಯಾ? ಎಂದು ಪ್ರಶ್ನಿಸಿದ್ದು, ಈ ವೇಳೆ ಟೀಚರ್ ನನಗೆ ಹೊಡೆದರು ಅವರನ್ನು ಬಂಧಿಸಿ ಎಂದು ಬೇಡಿಕೆ ಇಟ್ಟಿದ್ದಾನೆ.

ಟೀಚರ್ ಯಾಕೆ ಹೊಡೆದರು ಎಂದು ಹೇಳಿದಾಗ ನಾನು ಸರಿಯಾಗಿ ಬರೆಯಲಿಲ್ಲ ಅಂತ ಹೊಡೆದಿದ್ದಾರೆ ಎಂದು ಹೇಳಿದ್ದಾನೆ. ಇನ್ನೂ ಹುಡುಗನ ಮಾತು ಕೇಳಿ, ಘಟನೆಯನ್ನು ವಿಚಾರಣೆ ನಡೆಸಿದ ಇನ್ಸ್ ಪೆಕ್ಟರ್ ರಮಾದೇವಿ, ಈ ವಿದ್ಯಾರ್ಥಿಗೆ ಮಾತ್ರ ಟೀಚರ್ ಹೊಡೆದಿದ್ದಾರೆಯೇ ಇಲ್ಲ ಎಲ್ಲ ಮಕ್ಕಳಿಗೆ ಟೀಚರ್ ಹೊಡೆಯುತ್ತಿದ್ದಾರೆಯೇ ಎಂದು ವಿಚಾರಿಸಿದ್ದು, ಈ ವೇಳೆ ಈತನಿಗೆ ಮಾತ್ರವೇ ಹೊಡೆದಿರುವುದಾಗಿ ತಿಳಿದು ಬಂದಿದೆ.

ಬಳಿಕ ಹುಡುಗನನ್ನು ಸಾಕಷ್ಟು ಓಲೈಸಲು ಪ್ರಯತ್ನಿಸಿದರೂ  ಆತ ಹಠ ಬಿಡದೇ, ಟೀಚರ್ ನ್ನು ಬಂಧಿಸಬೇಕು ಎಂದು ಹಠ ಹಿಡಿದಿದ್ದ. ಕೊನೆಗೆ ಕೌನ್ಸಿಲಿಂಗ್ ಮೂಲಕ ಮಗುವಿಗೆ ತಿಳಿ ಹೇಳಲಾಗಿದ್ದು, ಸಮಸ್ಯೆಯನ್ನು ಸುಖಾಂತ್ಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮನೆಯವರೊಂದಿಗೆ ಸೇರಿ ಪ್ರೇಮಿಯ ಹತ್ಯೆ

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ: ಅಮಿತ್ ಶಾ ವಿಶ್ವಾಸ

ಡ್ರಗ್ಸ್​ ದಂಧೆ: ವಿದೇಶಿ ಪ್ರಜೆಗಳು ಸೇರಿ ನಾಲ್ವರು ಆರೋಪಿಗಳ ಬಂಧನ

ಕಲುಷಿತ ನೀರು ಸೇವನೆ: 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ನಾಳೆ, ನಾಡಿದ್ದು ರಾಜ್ಯದ ಹಲವೆಡೆ ಮಳೆ ಸಾಧ್ಯತೆ

ಹರ್ಷ ಕೊಲೆ ಪ್ರಕರಣ: ಎನ್‌ ಐಎಗೆ ಹಸ್ತಾಂತರಗೊಳ್ಳುವ ನಿರೀಕ್ಷೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

 

ಇತ್ತೀಚಿನ ಸುದ್ದಿ