ರಾಷ್ಟ್ರೀಯ ಹೆದ್ದಾರಿಯಲ್ಲೇ ಕಡವೆ ಬೇಟೆಯಾಡಿದ ಸೀಳುನಾಯಿಗಳು.!!
ಚಾಮರಾಜನಗರ: ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ ವಾಹನಗಳ ಓಡಾಡಟ ನಡುವೆಯೂ ಸೀಳುನಾಯಿಗಳ ಗುಂಪು ಬೇಟೆಯಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ.
ಕೇರಳ ರಸ್ತೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಕಾಡು ಬರಲಿದ್ದು ವಾಹನಗಳ ಓಡಾಟವು ಹೆಚ್ಚಿರಲಿದೆ. ರಸ್ತೆಬದಿ ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ 7ಕ್ಕೂ ಹೆಚ್ಚು ಸೀಳುನಾಯಿಗಳು ಅಟ್ಯಾಕ್ ಮಾಡಿ ತಮ್ಮ ಆಹಾರ ಪಡೆದಿದೆ.
ಆದರೆ, ಪ್ರಾಣ ಕಳೆದುಕೊಳ್ಳುವ ಕಡವೆಯ ಅಸಹಾಯಕತೆ ಕಂಡ ಪ್ರಯಾಣಿಕರು ಮರುಗಿದ್ದಾರೆ. ಇನ್ನು, ಈ ರೋಮಾಂಚಕ ದೃಶ್ಯವನ್ನು ರಂಗರಾಜು ಎಂಬವರು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw