ಕರಾಚಿಯಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಖೈಸರ್ ಹತ್ಯೆ: ವಾಂಟೆಡ್ ಭಯೋತ್ಪಾದಕನನ್ನು ಕೊಂದವರು ಯಾರು..? - Mahanayaka
6:58 PM Friday 20 - September 2024

ಕರಾಚಿಯಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಖೈಸರ್ ಹತ್ಯೆ: ವಾಂಟೆಡ್ ಭಯೋತ್ಪಾದಕನನ್ನು ಕೊಂದವರು ಯಾರು..?

01/10/2023

ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬದ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ಅಪರಿಚಿತರೇ ಕೊಂದಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಸದಸ್ಯ ಖೈಸರ್ ಫಾರೂಕ್ ನನ್ನು ಹತ್ಯೆಯಾದವರು. ಭಾನುವಾರ ಮುಂಜಾನೆ ಕರಾಚಿಯ ಜನನಿಬಿಡ ಪ್ರದೇಶದಲ್ಲೇ ಅಪರಿಚಿತರು ಆತನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಲಷ್ಕರ್-ಎ-ತೊಯ್ಬಾವನ್ನು ಸ್ಥಾಪಿಸುವಲ್ಲಿ ಮತ್ತು ಭಯೋತ್ಪಾದಕ ಹಫೀಜ್ ಸಯೀದ್‌ನೊಂದಿಗಿನ ನಿಕಟ ಸಂಬಂಧವನ್ನು ಹೊಂದಿದ್ದ ಕೈಸರ್ ಮೇಲೆ ಗುಂಡಿನ ದಾಳಿಯಾದ ಮಾಹಿತಿ ತಿಳಿಯುತ್ತಿದ್ದಂತೆ ತುರ್ತು ಸೇವೆಗಳು ಘಟನಾ ಸ್ಥಳಕ್ಕೆ ಧಾವಿಸಿತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಖೈಸರ್ ಫಾರೂಕ್ ಸಾವನ್ನಪ್ಪಿದ್ದರು.

ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ನಿಖರ ದಿನಾಂಕ ಮತ್ತು ಸಮಯ ಇಲ್ಲವಾದರೂ ಹಿಂಬದಿಯಿಂದ ಬಂದು ಗುಂಡು ಹಾರಿಸಿದ ವ್ಯಕ್ತಿ ಇತರರೊಂದಿಗೆ ಕರಾಚಿಯ ಬೀದಿಯಲ್ಲಿ ಓಡಿ ಹೋಗಿರುವುದು ಕಂಡುಬಂದಿದೆ.
ನಿಷೇಧಿತ ಮತ್ತು ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಖೈಸರ್ ಫಾರೂಕ್ ಮುಂಬೈ ಮೇಲಿನ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಎಲ್ಇಟಿ ಮುಖ್ಯಸ್ಥ ಖೈಸರ್ ಫಾರೂಕ್ ಅವರ ಆಪ್ತ ಸಹಾಯಕ ಆಗಿದ್ದ.


Provided by

ಇತ್ತೀಚಿನ ಸುದ್ದಿ