ಎಂ ಆರ್ ಪಿ ಎಲ್ ನ ಹಾರುವ ಬೂದಿಗೆ ಸುಟ್ಟು ಹೋದ ಒಣಗಲು ಹಾಕಿದ್ದ ಬಟ್ಟೆ
ಮಂಗಳೂರು: ನಗರದ ಸುರತ್ಕಲ್ ನ ಕೆಂಜಾರು ಪ್ರದೇಶದಲ್ಲಿ ಎಂಆರ್ ಪಿಎಲ್ ಕೊಕ್ ಸಲ್ಫರ್ ಘಟಕದಿಂದ ಕಳೆದ ರಾತ್ರಿ ಹೆಚ್ಚಿನ ಪ್ರಮಾಣದ ಹಾರುವ ಬೂದಿ ಬಿದ್ದಿದ್ದು, ಮನೆಗಳ ಹೊರಗೆ ಒಣಗಳು ಹಾಕಿದ್ದ ಬಟ್ಟೆಗಳ ಮೇಲೆ ಬಿದ್ದು ಅವುಗಳು ಸುಟ್ಟು ಹೋಗಿರುವ ಘಟನೆ ನಡೆದಿದೆ.
ಅಲ್ಲದೇ ಕೆಂಜಾರು ಪ್ರದೇಶದಲ್ಲಿರುವ ಗಿಡ ಮರಗಳು, ಮನೆಗಳ ಮೇಲ್ಛಾವಣಿ, ರಸ್ತೆ, ಮನೆಗಳ ಅಂಗಳದಲ್ಲಿ ಹಾರು ಬೂದಿಯ ಕಪ್ಪು ಮಸಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಎಂಆರ್‌ಪಿಎಲ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಎಂದಿನಂತೆಯೇ ಸ್ಮಶಾನದಿಂದ ಬಂದಿರಬಹುದು, ಗುಡ್ಡಕ್ಕೆ ಬೆಂಕಿ ಬಿದ್ದು ಬಂದಿರಬಹುದು, ನಮ್ಮಿಂದ ಯಾವುದೇ ಸಮಸ್ಯೆಗಳಾಗಿಲ್ಲ ಎಂದು ಸಮಜಾಯಿಷಿ ನೀಡಿದರು ಎನ್ನಲಾಗಿದೆ.
ಅಧಿಕಾರಿಗಳ ಸಮಜಾಯಿಷಿಗೆ ಆಕ್ರೋಶ ವ್ಯಕ್ತ ಪಡಿಸಿದ ಸ್ಥಳಿಯರು, “ನೀವು ಪ್ರತೀ ಸಲ ಇಂತಹಾ ನಾಟಕವಾಡಿ ಗ್ರಾಮಸ್ಥರನ್ನು ಮೂರ್ಖರನ್ನಾಗಿಸುವುದು ಬೇಡ. ಸ್ಮಶಾನದಿಂದ ಬಂದು ಬಿದ್ದಿದೆ ಎನ್ನುತ್ತಿರುವ ನೀವು ನಮ್ಮ ಊರಿಗೆ ಬಂದು ಇಡೀ ಊರನ್ನೇ ಸ್ಮಶಾನವಾಗಿ ಮಾರ್ಪಡಿಸುತ್ತಿದ್ದೀರಿ. ಗ್ರಾಮಸ್ಥರನ್ನು ಕಡೆಗಣಿಸಿದರೆ ಕೋಕ್ ಸಲ್ಫರ್ ಸಾಗಾಟ ಮಾಡುತ್ತಿರುವ ಎಂಆರ್‌ಪಿಎಲ್ ನ ಗೇಟನ್ನು ಮುಚ್ಚಿ ತೀವ್ರ ತರಹದ ಹೋರಾಟ ನಡೆಸಲಾಗುವುದು. ನಿಮ್ಮ ಸೆಕ್ಯೂರಿಟಿ ಅಥವಾ ಪೊಲೀಸ್ ತುಕಡಿಗಳನ್ನು ತಂದರೂ ಎಂಆರ್‌ಪಿಎಲ್ ವಿರುದ್ಧ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw