ಕ್ಲಬ್ ಹೌಸ್ ಹೌಸ್ ನಲ್ಲಿ ಇಂದು ಪ್ರಧಾನಿ ಮೋದಿ ಜನ್ಮ ದಿನಾಚರಣೆ: ಸಂಸದ ಪ್ರತಾಪ್ ಸಿಂಹ ಭಾಷಣ
ಮಂಗಳೂರು: ಸೆಪ್ಟೆಂಬರ್ 17 ಪ್ರಧಾನಿ ನರೆಂದ್ರ ಮೋದಿಯವರ ಜನ್ಮದಿನ. ದೇಶದ ಪ್ರಧಾನಿಯವರ ಜನ್ಮದಿನದ ಆಚರಣೆಗೆ ಈಗಾಗಲೇ ಸಿದ್ಧತೆಗಳು ಶುರುವಾಗಿದೆ. ಅದರಲ್ಲೂ ಗುಜರಾತಿನಲ್ಲಿ ಭಾರೀ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇನ್ನು ಬಿಜೆಪಿ ಕಾರ್ಯಕರ್ತರು, ಸಂಘಟನೆಯ ಕಾರ್ಯಕರ್ತರು ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೋಶಿಯಲ್ ಮಿಡಿಯಾಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ.
(ಇಂದು)ಸೆಪ್ಟೆಂಬರ್ 17 ರ ಸಂಜೆ 7.30 ಕ್ಕೆ ಮೋದಿಜಿ ಹುಟ್ಟುಹಬ್ಬದ ಪ್ರಯುಕ್ತ ಕ್ಲಬ್ ಹೌಸ್ ನಲ್ಲಿ ಆಚರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ. ಮತ್ತೊಂದು ವಿಶೇಷದ ಸಂಗತಿಯೆಂದರೆ ಪ್ರತಾಪ್ ಸಿಂಹ ಮೋದಿಯವರ ಕುರಿತು ಪುಸ್ತಕವೊಂದನ್ನು ರಚಿಸಿದ್ದಾರೆ. ಮೋದಿ ಬದುಕು ಮತ್ತು ಪ್ರಧಾನಿಯಾದ ನಂತರ ನಡೆದ ಘಟನೆಗಳನ್ನಾಧರಿಸಿದ ಹೊತ್ತಿಗೆಯ ಕುರಿತು ಮಾತಾಡಲಿದ್ದಾರೆ.
ಇನ್ನು ಇದೆ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದ ನಿರೂಪಣೆಯನ್ನ ರಮ್ಯ ವಸಿಷ್ಟ ಅವರು ವಹಿಸಲಿದ್ದಾರೆ. ಪ್ರಾಸ್ತವಿಕ ಭಾಷಣವನ್ನ ಪವನ್ ಕುಮಾರ್ ಅವರು ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಲು ಈ ಲಿಂಕ್ ಬಳಸಿ: https://www.clubhouse.com/join/gdkgVotP/Nu40X1H7/xn741evR
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಿ | ದೇವದಾಸ್ ಕಾಪಿಕಾಡ್ ಒತ್ತಾಯ
ದೇವಾಲಯ ತೆರವು: ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ
2023ರಲ್ಲಿ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ: ಹೆಚ್.ಡಿ.ದೇವೇಗೌಡ ಗುಡುಗು
ಮತ್ತೊಂದು ಫ್ಲೈಓವರ್ ನಿರ್ಮಾಣ ಮಾಡುವ ಸಿಹಿ ಸುದ್ದಿ ನೀಡಿದ ನಳಿನ್ ಕುಮಾರ್ ಕಟೀಲ್
ರಾತ್ರೋ ರಾತ್ರಿ ಇಬ್ಬರು ಹುಡುಗರ ಖಾತೆಗೆ ಜಮಾ ಆಯಿತು 900 ಕೋಟಿಗೂ ಅಧಿಕ ಹಣ!
ಮಹಿಳೆ ಮೃತಪಟ್ಟು ನಾಲ್ಕು ತಿಂಗಳ ಬಳಿಕ ಕೊರೊನಾ ಲಸಿಕೆ ನೀಡಿದ ಆರೋಗ್ಯ ಕೇಂದ್ರ!