ಸಿಎಂ ಭೇಟಿಗೆ ದೇವಸ್ಥಾನದಿಂದಲೇ ಬಂದ ದೇವಿ | ಕೊನೆಗೆ ನಡೆದದ್ದೇನು ಗೊತ್ತಾ? - Mahanayaka
10:19 PM Wednesday 4 - December 2024

ಸಿಎಂ ಭೇಟಿಗೆ ದೇವಸ್ಥಾನದಿಂದಲೇ ಬಂದ ದೇವಿ | ಕೊನೆಗೆ ನಡೆದದ್ದೇನು ಗೊತ್ತಾ?

basavaraj bommai
24/08/2021

ಬೆಂಗಳೂರು: ಪದವಿ ಬಂದರೆ, ಜನರು ಮಾತ್ರವಲ್ಲ, ದೇವರು ಕೂಡ ಮನೆಗೆ ಹುಡುಕಿಕೊಂಡು ಬರುತ್ತಾರೆ ಅನ್ನೋದು ಸತ್ಯವಾಗಿದೆ. ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಬೇಕು ಎಂದು ಸ್ವತಃ ದೇವಿಯೇ, ಸಿಎಂ ನಿವಾಸಕ್ಕೆ ಆಗಮಿಸಿದ್ದು, ಆದರೆ, ಸಿಎಂ ಭೇಟಿಗೆ ಅವಕಾಶ ಸಿಗದೇ ಮುನಿಸಿಕೊಂಡು ವಾಪಸ್ ಆದ ಘಟನೆ ನಡೆದಿದೆ.

ಹೌದು..! ಸಿಎಂ ಮನೆಗೆ ಬರಬೇಕು ಎಂದು ದೇವಿ ಹೇಳಿದ್ದಾಳೆ ಎಂದು ಸಿಎಂ ಮನೆಗೆ ಉತ್ಸವ ಮೂರ್ತಿಯನ್ನು ಹಿಡಿದುಕೊಂಡು ದೇವಸ್ಥಾನದ ಆಡಳಿತ ಮಂಡಳಿಯವರು ಆಗಮಿಸಿ ಬಿಗ್ ಡ್ರಾಮಾ ನಡೆಸಿದ ಘಟನೆ ವರದಿಯಾಗಿದ್ದು, ದೇವರ ಹೆಸರಿನಲ್ಲಿ ನಡೆಸುತ್ತಿರುವ ವಿಪರೀತ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿಯ ಪ್ರಕಾರ, ಸಿಎಂ ನಿವಾಸದ ಬಳಿ ಬಂದ  ಕೆಂಗೇರಿ ಬಳಿಯ ಹೆಚ್.ಗೊಲ್ಲಹಳ್ಳಿಯ ದೇವಸ್ಥಾನದವರು ಸಿಎಂ ಭೇಟಿಗೆ ಯತ್ನಿಸಿದ್ದಾರೆ. ಇದಕ್ಕೆ ಅವರು ನೀಡಿದ ಕಾರಣ ಮಾತ್ರ ವಿಚಿತ್ರವಾಗಿತ್ತು. ದೇವರ ಮೂರ್ತಿಯೊಂದಿಗೆ ಬಂದಿದ್ದ ತಂಡವನ್ನು ತಡೆದು ಪ್ರಶ್ನಿಸಿದಾಗ, ದೇವಿಯ ಸೂಚನೆಯಂತೆ ಸಿಎಂ ಬೊಮ್ಮಾಯಿ ಅವರಿಗೆ ವಿಗ್ರಹ ನೀಡಲು ಬಂದಿದ್ದೇವೆ ಎಂದು ತಂಡದಲ್ಲಿದ್ದ ಅರ್ಚಕ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

ಇವರ ಮಾತುಗಳಿಗೆ ಸೊಪ್ಪು ಹಾಕದ ಭದ್ರತಾ ಸಿಬ್ಬಂದಿ ಸಿಎಂ ಭೇಟಿಗೆ ಅವಕಾಶ ನೀಡಿಲ್ಲ. ಇದರಿಂದಾಗಿ ದೇವಸ್ಥಾನದ ಆಡಳಿತ ಮಂಡಳಿಯವರ ಜೊತೆಗೆ ದೇವಿ ವಾಪಸ್ ಆಗುವಂತಾಗಿದೆ.

ಇನ್ನಷ್ಟು ಸುದ್ದಿಗಳು…

 

ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳಿಗೆ ಬಿಗ್ ಶಾಕ್ | 6 ವರ್ಷಗಳ ಕಾಲ ಅನರ್ಹರಾಗುವ ಸಾಧ್ಯತೆ

ಶಾಕಿಂಗ್ ನ್ಯೂಸ್: ಮಗುವಿಗೆ ಜನ್ಮ ನೀಡಿದ 12 ವರ್ಷ ವಯಸ್ಸಿನ ಬಾಲಕಿ

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

ಫುಡ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರು ಸಜೀವ ದಹನ

ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು

ಅಫ್ಘಾನಿಸ್ತಾನ ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದು ಆಗದಿರಲಿ: ಸಿಂಗಪುರ ಪ್ರಧಾನಿ

ರಕ್ಷಾ ಬಂಧನ ಕಟ್ಟಿ ವಾಪಸ್ ಆಗುತ್ತಿದ್ದ ವೇಳೆ ಭೀಕರ ಅಪಘಾತ: ಪತಿ, ಪತ್ನಿ, ಮಗು ದಾರುಣ ಸಾವು

ಇತ್ತೀಚಿನ ಸುದ್ದಿ