ಸಿಎಂ ಬೊಮ್ಮಾಯಿ ಅವರನ್ನು ನೋಡಲು ಬಂದ ಬಾಲಕನ ಮೇಲೆ ಪೊಲೀಸರಿಂದ ಹಲ್ಲೆ!
ದಾವಣಗೆರೆ: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಟಿವಿ ಚಾನೆಲ್ ನಲ್ಲಿಯೇ ಕುಳಿತು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದು ನೀವು ನೋಡಿರಬಹುದು. ನ್ಯೂಸ್ ಚಾನೆಲ್ ನ ಸ್ಟುಡಿಯೋ ಒಳಗೆ ಬಂದು ಸಿಎಂನ್ನು ಒಬ್ಬ ಜನಸಾಮಾನ್ಯ ಭೇಟಿ ಮಾಡುವುದನ್ನೂ ನೀವು ನೋಡಿರಬಹುದು. ಆದರೆ, ಇವೆಲ್ಲ ಕೇವಲ ಟಿವಿ ಚಾನೆಲ್ ಗಳ ಸ್ಕ್ರಿಪ್ಟ್ ಆಧರಿತ ಕಾರ್ಯಕ್ರಮಗಳಲ್ಲಿ ಮಾತ್ರವೇ ಸಾಧ್ಯ ಎನ್ನುವುದು ಇದೀಗ ಸಾಬೀತಾಗಿದೆ.
ಹೌದು…! ಸಿಎಂನ್ನು ನೋಡಲು ಬಂದ ಬಾಲಕನೊಬ್ಬನಿಗೆ ಪೊಲೀಸರು ರಕ್ತ ಬರುವಂತೆ ಹೊಡೆದಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದ್ದು, ಸಾರ್ವಜನಿಕವಾಗಿ ಈ ಘಟನೆ ತೀವ್ರ ಆಕ್ರೋಶವನ್ನುಂಟು ಮಾಡಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿದ್ದರು. ಈ ವೇಳೆ ಸಿಎಂನ್ನು ನೋಡಲು ಓಡೋಡಿ ಬಂದಿದ್ದ ನಿತಿನ್ ಎಂಬ ಬಾಲಕನ ತಲೆಗೆ ಪೊಲೀಸ್ ಟೋಪಿಯಿಂದ ಹೊಡೆಯಲಾಗಿದ್ದು, ಅಡ್ಡಾದಿಡ್ಡಿ ಓಡಾಡ್ತಿಯಾ? ಎಂದು ಗದರಿಸಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರ ಹಲ್ಲೆಯಿಂದಾಗಿ ಬಾಲಕನ ತಲೆಗೆ ಗಾಯವಾಗಿದ್ದು, ತಲೆಯಲ್ಲಿ ರಕ್ತ ಬಂದಿದೆ ಎಂದು ವರದಿಯಾಗಿದೆ. ಸ್ಥಳದಿಂದ ಬಾಲಕ ಅಳುತ್ತಲೇ ಮನೆಗೆ ತೆರಳಿದ್ದಾನೆ. ಇನ್ನೂ ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಪೊಲೀಸರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಭಾರೀ ಮಳೆ, ಭೂಕುಸಿತಕ್ಕೆ ಕೇರಳದಲ್ಲಿ 18 ಮಂದಿ ಬಲಿ: ಕೇರಳದಲ್ಲಿ ಇಂದು ಕೂಡ ರೆಡ್ ಅಲಾರ್ಟ್!
ಬಸ್ – ಮ್ಯಾಕ್ಸಿಕ್ಯಾಬ್ ನಡುವೆ ಭೀಕರ ಅಪಘಾತ ಮೂವರು ರೈತರ ದಾರುಣ ಸಾವು
ನಡು ಬೀದಿಯಲ್ಲಿ ತಲ್ವಾರ್ ಝಳಪಿಸುತ್ತಾ ಡಿಜೆಗೆ ಸ್ಟೆಪ್ ಹಾಕಿದ ಹಿಂದುತ್ವ ಕಾರ್ಯಕರ್ತರು!
ಕೇರಳದಲ್ಲಿ ಮತ್ತೆ ಜಲಪ್ರಳಯದ ಭೀತಿ: ಬಿಟ್ಟು ಬಿಡದಂತೆ ಸುರಿಯುತ್ತಿದೆ ಭಾರೀ ಮಳೆ | ಮೂವರು ಬಲಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ | ಏಮ್ಸ್ ಅಧಿಕಾರಿ ಮಾಹಿತಿ
ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ
ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ 89 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಕಳ್ಳರು!