ಮಹಾರಾಷ್ಟ್ರ ನಾಯಕರ ಚಳಿ ಬಿಡಿಸಿದ ಸಿಎಂ ಬೊಮ್ಮಾಯಿ: ಸಂಜಯ್ ರಾವತ್ ಒಬ್ಬ ದೇಶ ದ್ರೋಹಿ, ಚೀನಾ ಏಜೆಂಟ್ ಎಂದ ಸಿಎಂ - Mahanayaka

ಮಹಾರಾಷ್ಟ್ರ ನಾಯಕರ ಚಳಿ ಬಿಡಿಸಿದ ಸಿಎಂ ಬೊಮ್ಮಾಯಿ: ಸಂಜಯ್ ರಾವತ್ ಒಬ್ಬ ದೇಶ ದ್ರೋಹಿ, ಚೀನಾ ಏಜೆಂಟ್ ಎಂದ ಸಿಎಂ

cm bommai
22/12/2022

ಬೆಳಗಾವಿ: ನಾನು ರಾವತ್ ಅವರನ್ನು ಚೀನಾ ಏಜೆಂಟ್ ಎಂದು ಕರೆಯುತ್ತೇನೆ, ಸಂಜಯ್ ರಾವತ್ ಚೀನಾ ಏಜೆಂಟ್, ಅವರು ದೇಶದ್ರೋಹಿ, ಸಂಜಯ್ ರಾವತ್ ಒಬ್ಬ ದೇಶ ದ್ರೋಹಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸದನದಲ್ಲಿ ಶಿವಸೇನಾ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


Provided by

ಚೀನಾ ಭಾರತದ ಗಡಿ ಪ್ರವೇಶಿಸಿದಂತೆ ನಾನು ಕರ್ನಾಟಕಕ್ಕೆ ಪ್ರವೇಶಿಸುತ್ತೇನೆ ಎಂದಿದ್ದ ರಾವತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ಈ ಒಕ್ಕೂಟ ವ್ಯವಸ್ಥೆಯಲ್ಲಿ ಯಾರಾದರೂ ಅಕ್ರಮವಾಗಿ ಬೇರೆ ರಾಜ್ಯಕ್ಕೆ ಪ್ರವೇಶಿಸುತ್ತೇನೆ ಎಂದು ಹೇಳಿದರೆ ಅದು ಒಕ್ಕೂಟ ವ್ಯವಸ್ಥೆ ನಾಶಪಡಿಸುವ ಪ್ರಯತ್ನ, ನೀವು ಚೀನಾದಂತೆ ನಮ್ಮ ರಾಜ್ಯ ಪ್ರವೇಶಿಸಿದರೆ ನಾವು ಭಾರತೀಯ ಸೈನಿಕರಂತೆ ನಿಮ್ಮ ಮೇಲೆ ಪ್ರತಿದಾಳಿ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ನೆಲ, ಜಲದ ಹಿತ ಕಾಪಾಡಲು ಮತ್ತು ಕಾನೂನಿನ ಹೋರಾಟದ ಸಮರ್ಥನೆ ಮಾಡಲು ಖಂಡನಾ ನಿರ್ಣಯದ ಮೂಲಕ ರಾಜ್ಯ ಸರ್ಕಾರ ತನ್ನ ಬದ್ದತೆಯನ್ನು ಪ್ರದರ್ಶಿಸಿದ್ದು, ಸಿಎಂ ಅವರ ಪ್ರತಿಕ್ರಿಯೆಗೂ ಮೊದಲು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂಗೆ ಸಲಹೆ ನೀಡಿದ್ದು, ನಾವು ಮಹಾರಾಷ್ಟ್ರದವರಂತಹ ಪದಗಳನ್ನು ಬಳಕೆ ಮಾಡುವುದು ಬೇಡ, ನಾಗರಿಕ ಶಬ್ಧದಲ್ಲಿಯೇ ಅವರಿಗೆ ಉತ್ತರಿಸಿ ಎಂದಿದ್ದರು.


Provided by

ಸಿಎಂ ಬೊಮ್ಮಾಯಿ ತಮ್ಮ ಪ್ರತಿಕ್ರಿಯೆ ವೇಳೆ ಸಿದ್ದರಾಮಯ್ಯನವರ ಮಾತುಗಳನ್ನು ಉಲ್ಲೇಖಿಸಿ, ಮಹಾರಾಷ್ಟ್ರ ನಾಯಕರಿಗೆ ತಿರುಗೇಟು ನೀಡಿ, ನಾವು ನಿಮ್ಮಂತೆಯೇ ನಿಮಗೆ ಪ್ರತಿಕ್ರಿಯೆ ನೀಡಬಹುದು, ಆದರೆ ವಿಪಕ್ಷ ನಾಯಕರು ನಾಗರಿಕ ಭಾಷೆಯಲ್ಲಿ ಉತ್ತರಿಸಲು ಹೇಳಿದ್ದಾರೆ. ನಾವು ನಾಗರಿಕ ಭಾಷೆಯಲ್ಲಿಯೇ ಉತ್ತರಿಸುವುದಾಗಿ ಹೇಳಿದರಲ್ಲದೇ, ಕಟು ವಾಕ್ಯಗಳ ಮೂಲಕ ಮಹಾರಾಷ್ಟ್ರ ನಾಯಕರ  ಉದ್ಧಟತನದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ