ಆಗಾಗ ಎದ್ದು ನಿಂತು ಮಾತನಾಡುತ್ತಿದ್ದ ಯತ್ನಾಳ್ ಗೆ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ - Mahanayaka
10:25 PM Thursday 12 - December 2024

ಆಗಾಗ ಎದ್ದು ನಿಂತು ಮಾತನಾಡುತ್ತಿದ್ದ ಯತ್ನಾಳ್ ಗೆ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ

siddaramaiah yathnal
12/07/2023

ಬೆಂಗಳೂರು: ಸದನದಲ್ಲಿ ಪದೇ ಪದೇ ಎದ್ದು ಮಧ್ಯೆ ಬಾಯಿ ಹಾಕಿ ಮಾತನಾಡುತ್ತಿದ್ದ ಯತ್ನಾಳ್ ಗಮನ ಸೆಳೆದಿದ್ದರು. ಇದೀಗ ಯತ್ನಾಳ್ ಅವರು ಪದೇ ಪದೇ ಎದ್ದು ನಿಂತು ಮಾತನಾಡುತ್ತಿರುವುದು ವಿಪಕ್ಷ ನಾಯಕ ಸ್ಥಾನಕ್ಕಾಗಿ ಎಂದು ಸಿದ್ದರಾಮಯ್ಯ ಸದನದಲ್ಲೇ ಹೇಳಿದ್ದು, ಸ್ವಾರಸ್ಯಕರ  ಚರ್ಚೆಗೆ ಕಾರಣವಾಯ್ತು.

ಪದೇ ಪದೇ ಸದನದಲ್ಲಿ ಎದ್ದು ನಿಂತು ಮಾತನಾಡುತ್ತಿದ್ದ ಯತ್ನಾಳ್ ರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ,  ಯತ್ನಾಳ್ ಅವರೆ, ನೀವು ಸಂಸದೀಯ ಪಟು ಅದ್ಕೊಂಡಿದ್ದೀನಿ, ನೀವೂ ಒಬ್ಬರು ಆಕಾಂಕ್ಷಿಯಾಗಿದ್ದೀರಿ… ಜಾಸ್ತಿ ಎದ್ದು ನಿಂತ್ರೆ. ನನ್ನನ್ನು ಮಾಡ್ತಾರೆ ಅಂತ ಅಂದ್ಕೊಂಡಿದ್ದೀರಿ,  ಆದ್ರೆ ಅವರು ಯಾರನ್ನು ಮಾಡ್ಬೇಕೋ ಅವರನ್ನೇ ಮಾಡ್ತಾರೆ ಎಂದಿದ್ದಾರೆ.

ಮಧ್ಯೆ ಮಧ್ಯೆ ಎದ್ದು ಮಾತನಾಡಿದ್ರೆ ನಿಮ್ಮನ್ನು ಮಾಡೇ ಮಾಡ್ತಾರೆ ಅಂತ ನೀವು ಅಂದ್ಕೊಂಡಿದ್ದೀರಿ ಪಾಪ,  ನನಗಿರೋ ಇನ್ಫಾರ್ಮೇಷನ್ ಪ್ರಕಾರ,  ನಿಮ್ಮನ್ನ ಮಾಡಲ್ಲ ಎಂದರು.

ಇನ್ನೂ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ,  ನನ್ಗೆ ಅವರನ್ನ ಕಂಡ್ರೆ ಪ್ರೀತಿ, ಯಾಕಂದ್ರೆ ಅವರು ಬಿಜೆಪಿನೇ ಬೈತಾರೆ ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಯತ್ನಾಳ್ ಅವರ ಕಾಲೆಳೆದರು.

ಮಧ್ಯೆ ಅರಗ ಜ್ಞಾನೇಂದ್ರ ಅವರು ಮಾತನಾಡಲು ಮುಂದಾದಾಗ  ನೀವಂತೂ ಆಕಾಂಕ್ಷಿ ಅಲ್ಲ,  ಅಶ್ವತ್ ನಾರಾಯಣ್ ಆಕಾಂಕ್ಷಿ ಇದ್ದಾರೆ ಎಂದರು. ಈ ವೇಳೆ ನಡುವೆ ಮಾತನಾಡಿದ ಯತ್ನಾಳ್,  ನೀವು ಏನೇ ಬೆಂಕಿ ಹಚ್ಚಿದ್ರೂ, ಬೆಂಕಿ ಹತ್ತುವುದಿಲ್ಲ ಎಂದರು.

ಈ ವೇಳೆ ಯತ್ನಾಳ್ ಗೆ ಮತ್ತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ನಿಮ್ಮನ್ನಂತೂ ಮಾಡಲ್ಲ, ನೀವು ಪಾಪ ಎಷ್ಟೇ ಎದ್ದು ನಿಂತ್ಕಂಡ್ರೂ ಕಿರುಚಾಡಿದ್ರೂ,  ನಿಮ್ಮನ್ನ ಮಾಡಲ್ಲ… ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್,  ನಾನು ಆಗುದಿಲ್ಲ  ಅಂತ ನಿಮ್ಗೆ ವಿಶ್ವಾಸ ಯಾಕಂದ್ರೆ ನಿಮ್ಗೆ ಯಾರ್ ಜೊತೆಗೋ ಅಡ್ಜೆಸ್ಟ್ ಮೆಂಟ್ ಆಗಿದೆ…  ಎಂದರು.

ಯತ್ನಾಳ್ ಮಾತಿಗೆ ಉತ್ತರಿಸಿದ ಸಿದ್ದರಾಮಯ್ಯ, ನನ್ನ ರಾಜಕೀಯ ಜೀವನದಲ್ಲಿ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ… ಇಲ್ಲಿ ನಿಮ್ಮ ಮಿನಿಸ್ಟರ್ ಗಳಿದ್ದಾರೆ, ಯಾರ ಮನೆಗಾದ್ರೂ ನಾನು ಹೋಗಿದ್ದೀನಾ ಕೇಳಿ? ಎಂದು ಪ್ರಶ್ನಿಸಿದ್ರು.

ಈ ವೇಳೆ ಮತ್ತೆ ಮಾತನಾಡಿದ ಯತ್ನಾಳ್, ಅದಕ್ಕೆಲ್ಲ ಯಾಕೆ ಮನೆಗೆ ಹೋಗ್ಬೇಕು… ಫೋನ್ ಮಾಡಿ ಮಾತನಾಡಿದ್ರೆ ಸಾಕು ಎಂದರು. ಈ ವೇಳೇ ಇತರ ಬಿಜೆಪಿ ಸಸ್ಯರು ಗದ್ದಲ ಸೃಷ್ಟಿಸಿದರು.

ಈ ವೇಳೆ ಸ್ಪೀಕರ್ ಮಧ್ಯ ಪ್ರವೇಶಿಸಿ, ಸಿದ್ದರಾಮಯ್ಯ ಮಾತು ಮುಂದುವರಿಸಲು ಹೇಳಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಮತ್ತೆ ಅದೇ ವಿಷಯವನ್ನು ಮುಂದುವರಿಸಿ,  ಯತ್ನಾಳ್ ಎಷ್ಟು ಬಾರಿ ಆಯ್ಕೆ ಆಗಿದ್ರಿ… ಮೂರು ಸಲನೋ… ಬಹಳ ಸಂತೋಷ… ಆದ್ರೆ,  ನಾನು 83ರಿಂದ  ಇಲ್ಲಿದ್ದೀನಿ… ಅಂದಿನಿಂದ ಇಂದಿನ ವರೆಗೂ ನಾನು ವಿರೋಧ ಪಕ್ಷದವರ ಜೊತೆಗೆ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ. ಒಂದು ವೇಳೆ ಮಾಡಿದ್ದೇನೆ ಅಂತ ಸಾಬೀತು ಪಡಿಸಿದ್ರೆ, ಅವತ್ತೇ  ರಾಜಕೀಯದಿಂದ ನಿವೃತ್ತಿ ಆಗ್ತೀನಿ ಎಂದು ಸವಾಲು ಹಾಕಿದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ