ಸಿಎಂ ಎದುರಲ್ಲೇ ನೊಂದವರನ್ನು ಎಳೆದು ಹಾಕಲು ಮುಂದಾದ ಪೊಲೀಸರು
ಬೆಂಗಳೂರು: ಸಿಎಂ ಮನೆಯ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದವರನ್ನು ಪೊಲೀಸರು ಸಿಎಂ ಎದುರೇ ಎಳೆದು ಹೊರಗೆ ಹಾಕಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ನೊಂದವರನ್ನು ಸಮಾಧಾನ ಪಡಿಸಿಕಳುಹಿಸಿದ ಘಟನೆ ನಡೆದಿದೆ.
ಮೊರಾರ್ಜಿ ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಹೆಚ್ಚುವರಿ ನೇಮಖಾತಿ ಲಿಸ್ಟ್ ಪ್ರಕಟಕ್ಕೆ ವಿಳಂಬ ಮಾಡುತ್ತಿರುವುದರಿಂದ ನೊಂದ ಅಭ್ಯರ್ಥಿಗಳು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದರು.
ಸಿಎಂ ಭೇಟಿಗಾಗಿ ಅಭ್ಯರ್ಥಿಗಳು ಬೆಳಗ್ಗಿನಿಂದಲೇ ಮಳೆಯ ನಡುವೆಯೂ ಕಾದಿದ್ದರು. ಆದರೆ ಸಿಎಂ ಬೊಮ್ಮಾಯಿ ಅವರು ತುರ್ತಾಗಿ ಹೋಗಬೇಕಾಗಿರುವುದರಿಂದ ಸಮಸ್ಯೆಯನ್ನು ಆಳಿಸದೇ ಮನೆಯಿಂದ ಹೊರಟಿದ್ದಾರೆ. ಈ ವೇಳೆ ಸಿಎಂ ಜೊತೆಗೆ ಮಾತನಾಡಲು ಅಭ್ಯರ್ಥಿಗಳು ಮುಂದಾಗಿದ್ದಾರೆ. ಇದನ್ನು ಕಂಡ ಪೊಲೀಸರು ನೊಂದವರನ್ನು ಹಿಂದಕ್ಕೆ ತಳ್ಳಿ ಸಮಸ್ಯೆ ಹೇಳಿಕೊಳ್ಳಲು ಅಡ್ಡಿಪಡಿಸಿದ್ದಾರೆ.
ಈ ಘಟನೆಯನ್ನು ಗಮನಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾರಿನಿಂದ ಇಳಿದು ಬಂದು, ಪೊಲೀಸರನ್ನು ತಡೆದು, ಅಭ್ಯರ್ಥಿಗಳ ಸಮಸ್ಯೆಯನ್ನು ಆಳಿಸಿದರು. ಜೊತೆಗೆ ಈ ಸಮಸ್ಯೆಯ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಾರಮ್ಮ, ಮಹಾಕಾಳಿಯೂ ಮಾಂಸಾಹಾರಿಗಳಲ್ಲವೇ? | ಹಂಸಲೇಖರನ್ನು ವಿಲನ್ ಮಾಡಿದ ಮಾಧ್ಯಮಗಳು
ಅತಿಥಿಯಾಗಲು ಸದಾ ಸಿದ್ಧ ಆತಿಥೇಯರಾಗುವಿರಾ ?
ಮನೆ ಕೆಲಸದವರನ್ನು ಕೊಂದು 95 ಲಕ್ಷ ರೂ. ದೋಚಿದ ಐವರು ದರೋಡೆಕೋರರು ಅರೆಸ್ಟ್
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಗೆ ಕೋಲಾರ ಪ್ರವೇಶಕ್ಕೆ ನಿರ್ಬಂಧ!
ಕಾಲುಂಗುರ, ಕಾಲ್ಗೆಜ್ಜೆ ಕಳವು ಮಾಡಲು ಮಹಿಳೆಯ ಪಾದವನ್ನೇ ಕತ್ತರಿಸಿದ ದರೋಡೆಕೋರರು!
ಸಿನಿಮಾಗೆ ಪ್ರೇರಣೆಯಾದ ಪಾರ್ವತಿ ಅಮ್ಮಾಳ್ ಅವರ ಹೆಸರಿಗೆ 10 ಲಕ್ಷ ರೂ. ಠೇವಣಿ ಇಡಲಿರುವ ನಟ ಸೂರ್ಯ!