ಮನೆಗೆ ಎಂಟ್ರಿಕೊಟ್ಟು ಬೆಕ್ಕಿನ ಮರಿಯನ್ನು ನುಂಗಿದ ನಾಗರಹಾವು!

ಕೊಟ್ಟಿಗೆಹಾರ: ಯುಗಾದಿ ಹಬ್ಬದ ದಿನದಂದೇ ಮನೆಗೆ ಬಂದ ನಾಗರಹಾವು ಮನೆಯಲ್ಲಿದ್ದ ಬೆಕ್ಕಿನ ಮರಿಯನ್ನ ನುಂಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ನಡೆದಿದೆ.
ತರುವೆ ಗ್ರಾಮದ ದೀಕ್ಷಿತ್ ಎಂಬುವರ ಮನೆಗೆ ಬಂದ ನಾಗರಹಾವು ನೇರವಾಗಿ ಮಂಚದ ಕೆಳ ಭಾಗಕ್ಕೆ ಸೇರಿದೆ. ಮನೆಯಲ್ಲಿದ್ದವರು ಹಬ್ಬದ ಸಿದ್ದತೆಯಲ್ಲಿದ್ದ ಕಾರಣ ಯಾರು ಹಾವನ್ನು ಗಮನಿಸಿರಲಿಲ್ಲ.
ನಂತರ ಬೆಕ್ಕಿನ ಮರಿಯನ್ನು ನುಂಗಿದ ನಾಗರಹಾವು ಸ್ವತಃ ಹೊರ ಬಂದು ಮುಂದೆ ಸಂಚರಿಸಲಾಗದೆ ಪರದಾಡುತ್ತಿತ್ತು.
ಕೂಡಲೇ ಸ್ಥಳಕ್ಕೆ ಬಂದ ಉರಗತಜ್ಞ ಸ್ನೇಕ್ ಆರೀಫ್ ಬೆಕ್ಕಿನ ಮರಿ ನುಂಗಿದ್ದರಿಂದ ಸುಸ್ತಾಗಿ ಸಂಚರಿಸಲಾಗದೆ ಪರದಾಡುತ್ತಿದ್ದ ಹಾವನ್ನ ಸೆರೆಹಿಡಿದು ನುಂಗಿದ್ದ ಬೆಕ್ಕಿನ ಮರಿಯನ್ನು ಹಾವಿನ ಹೊಟ್ಟೆಯಿಂದ ಕಕ್ಕಿಸಿದ್ದಾರೆ. ನಂತರ ಸುರಕ್ಷಿತವಾಗಿ ಹಾವನ್ನ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಹಾವನ್ನು ಕಂಡು ಮನೆಯವರು ಹಾಗೂ ಅಕ್ಕ–ಪಕ್ಕದವರು ನಿಟ್ಟುಸಿರು ಬಿಟ್ಟಿದ್ದಾರೆ. ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಾಡು ಪ್ರಾಣಿಗಳು ಆಹಾರ ಹರಿಸಿ ನಾಡಿಗೆ ಬರುತ್ತಿವೆ. ಈಗಾಗಲೇ ಮಲೆನಾಡಿನದ್ಯಂತ ಆನೆ, ಹುಲಿ, ಚಿರತೆ ಹಾಗೂ ಕಾಡುಕೋಣದ ಹಾವಳಿ ಮಿತಿಮೀರಿದೆ.
ಬಿಸಿಲಿನ ತಾಪಕ್ಕೆ ಭೂಮಿಯ ಒಳಭಾಗದಲ್ಲೂ ಬಿಸಿ ಹೆಚ್ಚಾಗಿ ಅರಣ್ಯದಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಹಾಗೂ ಆಹಾರ ಸಿಗದ ಕಾರಣ ನಾಗರಹಾವು ಸೇರಿದಂತೆ ಕಾಳಿಂಗ ಸರ್ಪಗಳು ಗ್ರಾಮಗಳತ್ತ ಬರುತ್ತಿವೆ. ಶೀಘ್ರವೇ ಮಳೆಯಾಗದಿದ್ದರೆ ಮತ್ತಷ್ಟು ಕಾಡುಪ್ರಾಣಿಗಳ ಹಾವಳಿ ಹೆಚ್ಚಾದರೂ ಆಶ್ಚರ್ಯವಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth