ಕಾಫಿನಾಡ ಚಂದು ತಲೆಯಲ್ಲಿ ಗಂಧದ ಗುಡಿ ಚಿತ್ರದ ಹೆಸರು: ಪುನೀತ್ ಚಿತ್ರದ ಪ್ರಚಾರಕ್ಕಿಳಿದ ಚಂದು
ಚಿಕ್ಕಮಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಅಭಿಮಾನಿ, ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿನಾಡ ಚಂದು ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಅಪ್ಪು ಅಭಿನಯದ ಗಂಧದ ಗುಡಿ ಚಿತ್ರದ ಪ್ರಚಾರಕ್ಕೆ ಕಾಫಿನಾಡ ಚಂದು, ವಿಶಿಷ್ಟ ಹೇರ್ ಸ್ಟೈಲ್ ಮೂಲಕ ಫೀಲ್ಡಿಗಿಳಿದಿದ್ದು, ತಲೆಯಲ್ಲಿ ಗಂಧದ ಗುಡಿ ಹೆಸರನ್ನು ತಲೆಯಲ್ಲಿ ಮೂಡಿಸುವ ಮೂಲಕ ಚಿತ್ರಕ್ಕೆ ಪ್ರಚಾರ ನೀಡುತ್ತಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಪ್ರಚಾರ ಮಾಡುತ್ತಿರುವ ಚಂದು, ಪುನೀತ್ ಅಣ್ಙನ ಸಿನಿಮಾ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತಾ, ಪ್ರಚಾರ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ವಿಶ್ ಮಾಡಿಯೇ ಹೆಸರಾಗಿರೋ ಚಂದು, ತನ್ನ ವಿಭಿನ್ನ ಶೈಲಿಯ ವಿಶಸ್ ನಿಂದ ಫೇಮಸ್ ಆಗಿದ್ದಾರೆ. ನಟ ಶಿವರಾಜ್ ಕುಮಾರ್ ಅವರನ್ನು ಕೂಡ ಚಾನೆಲ್ ವೊಂದರ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka