ಗಡಾಯಿಕಲ್ಲಿನಲ್ಲಿ ಟಿಕೆಟ್ ನೀಡದೆ ಹಣ ವಸೂಲಿ ಆರೋಪ: ವನ್ಯಜೀವಿ ಇಲಾಖೆ ವಿರುದ್ದ ಸಾರ್ವಜನಿಕರ ಆಕ್ರೋಶ
ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ತಾಲೂಕಿಗೆ ಮುಕುಟಪ್ರಾಯದಂತಿರುವ ನಡ ಗ್ರಾಮದ ಗಡಾಯಿಕಲ್ಲು(ಜಮಲಾಬಾದ್ ಗಡ) ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗೆ ಬರುವುದರಿಂದ ಇಲ್ಲಿಗೆ ಬರುವ ಮಕ್ಕಳಿಗೆ ರೂ.25 ದೊಡ್ಡವರಿಗೆ ರೂ.50 ದರವನ್ನು ಇಲಾಖೆ ನಿಗದಿ ಪಡಿಸಿದೆ. ಇಲ್ಲಿ ಪ್ರವಾಸಿಗರಿಂದ ರಶೀದಿ ನೀಡದೆ ಹಣ ಪಡೆದುಕೊಂಡು ಅವ್ಯವಹಾರ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನ.20ರಂದು ನಡೆದಿದೆ.
ಗಡಾಯಿಕಲ್ಲಿನಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ ಇದರಿಂದ ಪ್ರವಾಸಿಗರಿಗೆ ಅದರಲ್ಲೂ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಸಮರ್ಪಕವಾದ ಶೌಚಾಲಯ,ಕುಡಿಯುವ ನೀರು ಇತ್ಯಾದಿ ಮೂಲಭೂತ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳದೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದೆ.ಬರುವ ಪ್ರವಾಸಿಗರಿಂದ ರಶೀದಿ ನೀಡದೇ ಹಣ ಪಡೆದುಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಭೇಟಿ:
ಈ ಬಗ್ಗೆ ಸ್ಥಳೀಯರು ಶಾಸಕ ಹರೀಶ್ ಪೂಂಜ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಪ್ರವಾಸಿಗರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗಬಾರದು, ಟಿಕೆಟ್ ನೀಡದೆ ಹಣ ವಸೂಲಿ ಮಾಡಿದ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಆರ್ ಎಫ್ ಒ. ಸ್ವಾತಿ ಅವರಲ್ಲಿ ವಿಷಯವನ್ನು ತಿಳಿಸಿ,ತಪ್ಪು ಎಸಗಿದ್ದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ವ್ಯವಸ್ಥೆಗಳು ಸರಿ ಪಡಿಸದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದರು.
ಆನ್ ಲೈನ್ ಟಿಕೆಟ್ ಸಮಸ್ಯೆ:
ಮಳೆಗಾಲದಲ್ಲಿ ಪ್ರವೇಶ ನಿರ್ಬಂಧ ಇರುವ ಗಡಾಯಿಕಲ್ಲಿಗೆ ಇತ್ತೀಚೆಗೆಷ್ಟೇ ಪ್ರವೇಶ ಆರಂಭಿಸಲಾಗಿದೆ. ಪ್ರತಿ ದಿನ ನೂರಾರು ಜನರು ಇಲ್ಲಿ ಆಗಮಿಸುತ್ತಾರೆ. ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.
ಕೆಲವು ಪ್ರವಾಸಿಗರು ಆನ್ ಲೈನ್ ಮೂಲಕ ಟಿಕೆಟ್ ಮಾಡುತ್ತಾರೆ ಆದರೆ ಗಡಾಯಿಕಲ್ಲು ವ್ಯಾಪ್ತಿಯಲ್ಲಿ ನೆಟ್ ವರ್ಕ್ ಸಮಸ್ಯೆ ಇರುವುದರಿಂದ ಟಿಕೇಟು ಡೌನ್ ಲೋಡ್ ಆಗದೆ ಸಮಸ್ಯೆ ಉಂಟಾಗುತ್ತಿದೆ. ಇಂತಹ ಸಮಯ ಪ್ರವಾಸಿಗರ ಮತ್ತು ಇಲಾಖೆ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿಯು ನಡೆಯುತ್ತದೆ. ಹಾಗೂ ಇದು ಟಿಕೆಟ್ ವಿಚಾರದ ಗೊಂದಲಕ್ಕು ಕಾರಣವಾಗುತ್ತಿದೆ.
“ಟಿಕೆಟ್ ವಿಚಾರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿ ಇತ್ಯಾದಿ,ಮೇಲ್ಗಡೆ ಕೊಂಡೊಯ್ಯುವುದಕ್ಕೆ ನಿರ್ಬಂಧ ಹೇರಲು ಕ್ರಮ ಕೈಗೊಳ್ಳಲಾಗುವುದು. ಸೋಮವಾರ ಗಡಾಯಿಕಲ್ಲು ಪ್ರದೇಶಕ್ಕೆ ತೆರಳಿ ಇಲಾಖೆ ವತಿಯಿಂದ ಶುಚಿತ್ವ ನಿರ್ವಹಿಸಲಾಗಿದೆ. ಇಲ್ಲಿಗೆ ಬೇಕಾಗಿರುವ ಅಗತ್ಯ ಸೌಕರ್ಯಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.”
–ಸ್ವಾತಿ ಎಲ್, ಆರ್ ಎಫ್ ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ.
Video:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka