ಬೀದಿನಾಯಿಯನ್ನು ಹೊಡೆದು ಕೊಂದ ಕಾಲೇಜಿನ ಸಿಬ್ಬಂದಿ ವಿರುದ್ಧ ದೂರು ದಾಖಲು
ಶಿರ್ವ: ಬೀದಿನಾಯಿಯನ್ನು ಹೊಡೆದು ಕೊಂದ ಶಿರ್ವ ಗ್ರಾಮದ ಬಂಟಕಲ್ ಮಧ್ವವಾದಿರಾಜ ಕಾಲೇಜಿನ ಇಬ್ಬರು ಸಿಬ್ಬಂದಿ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.27ರಂದು ಬೆಳಗ್ಗೆ ಕಾಲೇಜಿನ ಗಾರ್ಡನ್ ಕೆಲಸ ಮಾಡುತ್ತಿರುವ ನಾಗರಾಜ್ ಮತ್ತು ವಾರ್ಡನ್ ರಾಜೇಶ್ ಎಂಬವರು ಸೇರಿ ಈ ಕೃತ್ಯ ಎಸಗಿದ್ದು, ಆವರಣದ ಒಳಗಡೆ ಇದ್ದ ಬಿಳಿ ಬಣ್ಣದ ಬೀದಿ ನಾಯಿಯನ್ನು ನಾಗರಾಜ್ ಕೋಲಿನಿಂದ ಹೊಡೆದು ಸಾಯಿಸಿದ್ದಾರೆ.
ಬಳಿಕ ಅವರು ಒಂದು ಗೋಣಿ ಚೀಲದಲ್ಲಿ ಎಳೆದುಕೊಂಡು ಬಂದು ಇನ್ನೊಂದು ಗೋಣಿ ಚೀಲದಲ್ಲಿ ಹಾಕಿದ್ದಾರೆ. ಈ ದೃಶ್ಯಾವಳಿಯನ್ನು ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬರು ವೀಡಿಯೋ ರೆಕಾರ್ಡ್ ಮಾಡಿ ಮೊಬೈಲ್ ಮೂಲಕ ಕಳುಹಿಸಿದ್ದಾರೆ ಎಂದು ಎಸ್.ಪಿ.ಸಿ.ಎ. ಪ್ರಾಣಿ ದಯಾ ಸಂಘದ ಸದಸ್ಯೆ, ಬಂಟಕಲ್ ಅರಸಿಕಟ್ಟೆ ನಿವಾಸಿ ಮಂಜುಳಾ ಕರ್ಕೇರಾ ದೂರಿನಲ್ಲಿ ತಿಳಿಸಿದ್ದಾರೆ. ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕೊಂದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw