ಕಾಲೇಜು ವಿದ್ಯಾರ್ಥಿಗಳಿಗೆ ಯಾವಾಗ ಲಸಿಕೆ ಸಿಗಲಿದೆ? | ಅಶ್ವತ್ಥ್ ನಾರಾಯಣ್ ಮಾಹಿತಿ
23/06/2021
ಬೆಂಗಳೂರು: ಜುಲೈ ಮೊದಲ ವಾರ ಅಥವಾ ಎರಡನೇ ವಾರ ಆದ್ಯತೆಯ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದ್ಯತೆಯ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಜುಲೈ ಮೊದಲ ಅಥವಾ 2 ನೇ ವಾರ ಲಸಿಕೆ ನೀಡಲಾಗುವುದು. ಡೆಲ್ಟಾ, ಡೆಲ್ಟಾ ಪ್ಲಸ್ ವೈರಸ್ ಗೆ ಲಸಿಕೆಯೇ ಸಂಜೀವಿನಿ. ಕೊರೊನಾ ವೈರಸ್ ಸೋಂಕು ಹೆಚ್ಚಾಗಿರುವುದರಿಂದ ರೂಪಾಂತರವಾಗುತ್ತೆ. ಹೀಗಾಗಿ ಕೋವಿಡ್ ಲಸಿಕೆಯೇ ಇದಕ್ಕೆ ರಾಮಬಾಣವಾಗಿದೆ ಎಂದರು.
ಹೊಸ ವೈರಸ್(ಡೆಲ್ಟಾ) ಬಗ್ಗೆ ಜನರು ಭಯಪಡುವ ಅಗತ್ಯ ಇಲ್ಲ. ರಾಜ್ಯ ಸರ್ಕಾರ ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಲಿದೆ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.