ಫೆಲೆಸ್ತೀನ್ 'ರಾಷ್ಟ್ರ' ಸ್ಥಾಪನೆಯತ್ತ: ರಾಯಭಾರಿ ಕಚೇರಿಯನ್ನು ಘೋಷಿಸಿದ ಕೊಲಂಬಿಯಾ - Mahanayaka

ಫೆಲೆಸ್ತೀನ್ ‘ರಾಷ್ಟ್ರ’ ಸ್ಥಾಪನೆಯತ್ತ: ರಾಯಭಾರಿ ಕಚೇರಿಯನ್ನು ಘೋಷಿಸಿದ ಕೊಲಂಬಿಯಾ

24/05/2024

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ನಿಧಾನಕ್ಕೆ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯತ್ತ ಹೊರಳುತ್ತಿರುವಂತೆ ಭಾಸವಾಗುತ್ತಿದೆ. ಈಗಾಗಲೇ ನಾರ್ವೆ ಐರ್ಲೆಂಡ್ ಮತ್ತು ಸ್ಪೇನ್ ಗಳು ಫೆಲೆಸ್ತೀನನ್ನು ಒಂದು ರಾಷ್ಟ್ರವಾಗಿ ಅಂಗೀಕರಿಸಿವೆ. ಇದರ ನಡುವೆಯೇ ಕೊಲಂಬಿಯಾ ಇನ್ನೊಂದು ಹೆಜ್ಜೆ ಇಟ್ಟಿದ್ದು ಫೆಲೆಸ್ತೀನಿನ ರಮಲ್ಲಾದಲ್ಲಿ ರಾಯಭಾರ ಕಚೇರಿಯನ್ನು ಆರಂಭಿಸುವುದಾಗಿ ಘೋಷಿಸಿದೆ.

ನಾವು ರಮಲ್ಲಾದಲ್ಲಿ ರಾಯಭಾರ ಕಚೇರಿಯನ್ನು ಸ್ಥಾಪಿಸುವೆವು, ಇದು ನಮ್ಮ ಮುಂದಿನ ಹೆಜ್ಜೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ತಾವೋ ಪೆಟ್ರೋ ಹೇಳಿದ್ದಾರೆ.

ಇದಕ್ಕಿಂತ ಮೊದಲು ಮೇ ಎರಡರಂದು ಕೊಲಂಬಿಯ ತನ್ನ ಇಸ್ರೇಲ್ ನಲ್ಲಿರುವ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು ಮತ್ತು ಇಸ್ರೇಲ್ ಜೊತೆಗೆ ರಾಯಭಾರ ಸಂಬಂಧವನ್ನೇ ಕಡಿದುಕೊಂಡಿತ್ತು. ಗಾಝಾದಲ್ಲಿ ಇಸ್ರೇಲ್ ಜನಾಂಗ ಹತ್ಯೆಯಲ್ಲಿ ತೊಡಗಿದೆ ಎಂಬುದು ಇದಕ್ಕೆ ಕಾರಣವಾಗಿ ನೀಡಿತ್ತು. 2023 ಅಕ್ಟೋಬರ್ 20ರಂದೇ ರಮಲ್ಲಾದಲ್ಲಿ ಕೊಲಂಬಿಯಾದ ರಾಯಭಾರ ಕಚೇರಿ ಸ್ಥಾಪಿಸುವ ಕುರಿತಂತೆ ಪೆಟ್ರೋ ಘೋಷಣೆ ಮಾಡಿದ್ದರು ಇದೆ ವೇಳೆ 2018 ಆಗಸ್ಟ್ ಮೂರರಂದು, ಫೆಲೆ ಸ್ತೀನ್ ಅನ್ನು ಒಂದು ರಾಷ್ಟ್ರವಾಗಿ ಕೊಲಂಬಿಯ ಅಂಗೀಕರಿಸಿತ್ತು ಎಂಬುದು ಇಲ್ಲಿ ಗಮನಾರ್ಹ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ