ಅಸಭ್ಯ ಸನ್ನೆ ಮಾಡಿದ ಆಮೆಗೆ ಕಾಮಿಡಿ ವೈಲ್ಡ್ ಲೈಫ್ ಫೋಟೋಗ್ರಫಿ ಅವಾರ್ಡ್! | ಸ್ಪರ್ಧೆಗೆ ಬಂದ ಫೋಟೋ ನೋಡಿದರೆ ಬಿದ್ದು ಬಿದ್ದು ನಗುತ್ತೀರಿ
ಅಸಭ್ಯ ಸನ್ನೆಯನ್ನು ಮಾಡುವ ಆಮೆಗೆ ಕಾಮಿಡಿ ವೈಲ್ಡ್ ಲೈಫ್ ಫೋಟೋಗ್ರಫಿ ಅವಾರ್ಡ್ -2020 ದೊರಕಿದ್ದು, ಈ ಅಗ್ರ ಬಹುಮಾನವನ್ನು ಮಾರ್ಕ್ ಫಿಟ್ಜ್‌ಪ್ಯಾಟ್ರಿಕ್ ಅವರು ಪಡೆದಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಲೇಡಿ ಎಲಿಯಟ್ ದ್ವೀಪದ ಕರಾವಳಿಯಲ್ಲಿ ಈಜುತ್ತಿದ್ದಾಗ ಅವರಿಗೆ ಸಮುದ್ರ ಆಮೆ ಎದುರಾಗಿತ್ತು. ಮತ್ತು ಅಸಭ್ಯ ಸನ್ನೆಯನ್ನೇ ಹೋಲುವಂತೆ ಸನ್ನೆ ಮಾಡಿತ್ತು. ಈ ಸಂದರ್ಭ ಅವರು ಫೋಟೋ ತೆಗೆದಿದ್ದು, ಮುಂಗೋಪಿ ಆಮೆ ಎಂಬ ಹಾಸ್ಯದ ಟೈಟಲ್ ನೀಡಿದ್ದಾರೆ.
ಇನ್ನೂ ಇನ್ನೋರ್ವ ಫೋಟೋ ಗ್ರಾಫರ್ ಅಲೆಕ್ಸ್ ವಾಕರ್ ಅವರಿಗೆ ಸೀರಿಯನ್ ಕ್ರಿಯೇಚರ್ಸ್ ಆನ್ ದಿ ಲ್ಯಾಂಡ್ ಪ್ರಶಸ್ತಿ ದೊರೆಯಿತು. ಬೆಳಗ್ಗಿನ ವೇಳೆ ನಿದ್ದೆಯಿಂದ ಎದ್ದೇಳಲು ಮನುಷ್ಯರು ಪಡುವ ಪಾಡನ್ನು ಹೋಲುವಂತಹ ಚಿತ್ರಕ್ಕಾಗಿ ಅವರು ಪ್ರಶಸ್ತಿ ಪಡೆದಿದ್ದಾರೆ. ಈ ಫೋಟೋಗೆ ಎದ್ದೇಳಲು ಬಹಳ ಸಮಯ ಎಂಬ ಟೈಟಲ್ ನೀಡಿದ್ದಾರೆ.
ಟಿಮ್ ಹಾರ್ನ್ ಅವರು ಸ್ಪೆಕ್ಟ್ರಮ್ ಫೋಟೋ ಕ್ರಿಯೇಚರ್ಸ್ ಇನ್ ದಿ ಏರ್ ಪ್ರಶಸ್ತಿಯನ್ನು ಗೆದ್ದಿದ್ದು, “ಹೈಡ್ ಅಂಡ್ ಸೀಕ್” ಎಂಬ ಟೈಟಲ್ ನ್ನು ನೀಡಿದ್ದಾರೆ. ಹುಲ್ಲಿನ ಕಾಂಡದಲ್ಲಿ ಅಡಗಿ ಕುಳಿತ ಕೀಟವೊಂದನ್ನು ಅವರು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.
ಇನ್ನೂ ರೋಲ್ಯಾಂಡ್ ಕ್ರಾನಿಟ್ಜ್ ಅವರಿಗೆ ಅಫಿನಿಟಿ ಫೋಟೋ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ದೊರಕಿತು. ಅವರು ಉಲ್ಲಾಸದಿಂದ ಹಾಡುತ್ತಿರುವಂತೆ ಕಾಣುವ ಅಳಿಲಿನ ಚಿತ್ರಕ್ಕಾಗಿ ಈ ಪ್ರಶಸ್ತಿಯನ್ನು ಗೆದ್ದರು.