ನಮ್ಮ ಮೆಟ್ರೋ ದುರಂತ:  ಆಟೋ ಚಾಲಕನ ಸಾವಿಗೆ ಪರಿಹಾರ, ಅಪಘಾತಕ್ಕೆ ಕಾರಣ ತಿಳಿಸಿದ ಬಿಎಂಆರ್ ಸಿಎಲ್!

namma mettro
16/04/2025

ಬೆಂಗಳೂರು:  ಏರ್‌ ಪೋರ್ಟ್ ಮಾರ್ಗದ ಮೆಟ್ರೋ ಕಾಮಗಾರಿಗೆ ಸಾಗಿಸುತ್ತಿದ್ದ ವಯಾಡೆಕ್ಟ್ ಕುಸಿದು ಬಿದ್ದು ಆಟೋ ಚಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬಿಎಂಆರ್ ಸಿಎಲ್ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.

ನಿನ್ನೆ ರಾತ್ರಿ 12:00 ಗಂಟೆ ಸುಮಾರಿಗೆ ನಡೆದ ದುರದೃಷ್ಟಕರ ಘಟನೆಯಲ್ಲಿ ಆಟೋ ಚಾಲಕನೊಬ್ಬ ಸಾವನ್ನಪ್ಪಿದ ವಿಷಯ ತಿಳಿಸಲು ಬಿಎಂಆರ್‌ಸಿಎಲ್ ವಿಷಾದಿಸುತ್ತಿದೆ. ಯಲಹಂಕ ಕೋಗಿಲು ಜಂಕ್ಷನ್‌ ನಲ್ಲಿ ಈ ಅಪಘಾತ ಸಂಭವಿಸಿದೆ. ಒಡೆಯರ್‌ ಪುರ ಕಾಸ್ಟಿಂಗ್ ಯಾರ್ಡ್‌ನಿಂದ ಕ್ಯಾರಿಯರ್ ಟ್ರಕ್ ಸಿಮೆಂಟ್ ಗೋಡೆಯನ್ನು ಸಾಗಿಸುತ್ತಿತ್ತು. ಟ್ರಕ್ ತಿರುವು ಪಡೆಯುವಾಗ, ಟ್ರೇಲರ್ ಮುಂದೆ ನುಗ್ಗಿದ ವಾಹನವನ್ನು ತಪ್ಪಿಸಲು ಹಠಾತ್ ಬ್ರೇಕ್ ಹಾಕಿದ್ದರಿಂದ ಗಿರ್ಡರ್ ಆಟೋರಿಕ್ಷಾದ ಮೇಲೆ ಬಿದ್ದು ಚಾಲಕನ ಸಾವಿಗೆ ಕಾರಣವಾಯಿತು. ಕ್ರೇನ್ ಮೂಲಕ ಸಿಮೆಂಟ್ ಗೋಡೆಯನ್ನು, ಚಾಲಕನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ಆತನನ್ನು ಬದುಕಿಸಲು ಸಾಧ್ಯವಾಗಿಲ್ಲ. ಅವರ ಕುಟುಂಬಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದಿದೆ.

ಪೊಲೀಸರು, ಅಪಘಾತದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಜೀವ ಹೋದ ಈ ಘಟನೆಗೆ ಬಿಎಂಆರ್‌ ಸಿಎಲ್ ತೀವ್ರ ಬೇಸರ ವ್ಯಕ್ತಪಡಿಸುತ್ತದೆ. ಹಾಗೂ ಕುಟುಂಬಕ್ಕೆ ನಿಗದಿತ ಪರಹಾರ ಧನವನ್ನು ಕೊಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಟೋ ಚಾಲಕ  ಖಾಸಿಂ ಸಾಬ್ ಹೆಗಡೆನಗರದ ನಿವಾಸಿಯಾಗಿದ್ದು, ಪ್ಯಾಸೆಂಜರ್ ಪಿಕ್ ಮಾಡಿಕೊಂಡು ನಾಗವಾರದ ಕಡೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಮಂಗಳವಾರ ತಡರಾತ್ರಿ 12:05 ಗಂಟೆಗೆ ಈ ಘಟನೆಯಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version