ಅಮುಲ್ — ನಂದಿನಿ ನಡುವೆ ಸ್ಪರ್ಧೆ: ಅಮುಲ್ ಎಂ.ಡಿ. ಜಯನ್ ಮೆಹ್ತಾ ಪ್ರತಿಕ್ರಿಯೆ
ಗಾಂಧಿನಗರ (ಗುಜರಾತ್): ಅಮುಲ್ ಹಾಲಿನ ಉತ್ಪನ್ನಗಳ ಮಾರಾಟದ ವಿರುದ್ಧ ಪ್ರತಿಭಟನೆಗಳು, ಆನ್ಲೈನ್ ಅಭಿಯಾನಗಳು ನಡೆಯುತ್ತಿರುವ ಬೆನ್ನಲ್ಲೇ ಅಮುಲ್ ಎಂಡಿ ಜಯನ್ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಗುಜರಾತ್‌ನ ಅಮುಲ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಹಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಅಭಿಯಾನಗಳು ನಡೆಯುತ್ತಿವೆ. ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಈ ಬಹಿಷ್ಕಾರದ ಕಾವು ಇನ್ನಷ್ಟು ಬಿಸಿಯಾಗಿದೆ. ಇದರ ಮಧ್ಯೆಯೇ ಗುಜರಾತ್ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅಮುಲ್ ಹಾಗೂ ನಂದಿನಿ ನಡುವೆ ಉತ್ತಮ ಸಂಬಂಧ ಇದೆ, ಅದು ಮುಂದುವರಿಯುತ್ತದೆ. ಅಮುಲ್ ಹಾಗೂ ನಂದಿನಿ ನಡುವೆ ಸ್ಪರ್ಧೆಯ ಪ್ರಶ್ನೆಯೇ ಇಲ್ಲ. ನಮ್ಮ ಅಮುಲ್ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿರುವುದು ಅಲ್ಲಿನ ನಂದಿನಿ ಬ್ಯಾಂಡ್ ಜೊತೆ ಸ್ಪರ್ಧಿಸಲು ಅಲ್ಲ. ಸ್ಥಳೀಯ ನಂದಿನಿ ಬ್ಯಾಂಡ್‌ನೊಂದಿಗೆ ಸೇರಿ, ಒಂದೇ ವೇದಿಕೆಯ ಮೂಲಕ ನಮ್ಮ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಇದು ನಮ್ಮ
ಜಯನ್ ‘BoycottAmul’ ‘GobackAmul’ Jo ಟೀಕೆಗಳು ಮತ್ತು ಘೋಷಣೆಗಳಿಗೆ ಪ್ರತಿಕ್ರಿಯಿಸಿ, “ಇದು ಅಮುಲ್ ವರ್ಸಸ್ ನಂದಿನಿಯ ವಿಚಾರ ಅದು ಅಮುಲ್ ಮತ್ತು ನಂದಿನಿ ಬಗ್ಗೆ. ಇವೆರಡೂ ಒಂದೇ ರೀತಿಯ ಹಿತಾಸಕ್ತಿಗಳ ಮೇಲೆ ಕೆಲಸ ಮಾಡುವ ರೈತ ಒಡೆತನದ ಸಹಕಾರಿಗಳಾಗಿವೆ. ನಾವಿಲ್ಲಿ ನಂದಿನಿಯೊಂದಿಗೆ ಸ್ಪರ್ಧಿಸಲು ಬಂದಿಲ್ಲ.
“ನಮ್ಮನ್ನು ವಿರೋಧಿಸುವವರು ಕೂಡ ನಮ್ಮ ಗ್ರಾಹಕರು. ಅವರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ಇದೆಲ್ಲ ಯಾವುದೂ ನಂದಿನಿ ಮತ್ತು ಅಮುಲ್ ನಡುವಿನ ಉತ್ತಮ ಸಂಬಂಧವನ್ನು ಬದಲಾಯಿಸುವುದಿಲ್ಲ. ನಾವು ನಂದಿನಿ ಜೊತೆ ಹಲವಾರು ಘಟಕಗಳಲ್ಲಿ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ ಒಂದು ದಶಕದಿಂದ ಬೆಂಗಳೂರಿನ ಮದರ್ ಡೈರಿ ಪ್ಲಾಂಟ್‌ನಲ್ಲಿ ನಂದಿನಿ ಹಾಲನ್ನು ಬಳಸಿ ಅಮುಲ್ ಐಸ್ ಕ್ರೀಂ ಪ್ಯಾಕ್ ಮಾಡುತ್ತಿದ್ದೇವೆ. ನಮಗೆ ಚೀಸ್‌ನ ಕೊರತೆ ಇದ್ದಾಗಲೂ, ಅವರು ಹೆಚ್ಚುವರಿಯಾಗಿದ್ದಾಗ ನಾವು ನಂದಿನಿಯಿಂದ ಚೆಡ್ಡಾರ್ ಚೀಸ್ ಖರೀದಿಸಿದ್ದೇವೆ. ಅಮುಲ್ ಗುಜರಾತ್‌ನಲ್ಲಿ ರೈತರಿಗೆ ಸಹಕಾರಿ ಆಗಿದ್ದರೆ, ಕರ್ನಾಟಕದಲ್ಲಿ ಕೆಎಂಎಫ್ ಸಹಕಾರಿಯಾಗಿದೆ. ಎರಡು ಸಹಕಾರಿ ಮತ್ತು ಎರಡು ರೈತ ಒಡೆತನದ ಸಂಸ್ಥೆಗಳ ನಡುವೆ ಪೈಪೋಟಿಯ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಎರಡು ಸಹಕಾರಿ ಸಂಘಗಳ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಅಮುಲ್ ಮೊಸರು ಮತ್ತು ಹಾಲಿನ ಉತ್ಪನ್ನಗಳನ್ನು ಇ- ಮತ್ತು ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಇದನ್ನು ಮುಂದಿನ ವಾರ ಪ್ರಾರಂಭಿಸಲಾಗುವುದು. ನಾವು ನಮ್ಮ ಪಾರ್ಲ‌್ರಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂದು ಜಯನ್ ಹೇಳಿದರು.
ಅಮುಲ್ ನ ಮೂರು ಉತ್ಪನ್ನಗಳು ಬೆಂಗಳೂರಿನಲ್ಲಿ ಮಾರಾಟ: ಬೆಂಗಳೂರಿನಲ್ಲಿ ಅಮುಲ್‌ನ ಮೂರು ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಇವುಗಳಲ್ಲಿ ಅಮುಲ್ ಫ್ರೆಶ್ ಟೋನ್ಸ್ ಹಾಲು ಲೀಟರ್‌ಗೆ 54 ರೂ., ಅಮುಲ್ ಗೋಲ್ಡ್ ಮಿಲ್ಕ್ (6% ಕೊಬ್ಬು) ಲೀಟರ್‌ಗೆ 64 ರೂ. ಮತ್ತು ಅಮುಲ್ ಮಸ್ತಿ ದಹಿ 450 ಗ್ರಾಂಗೆ 30 ರೂ. ಆಂಧ್ರಪ್ರದೇಶದ ಮದನಪಲ್ಲಿಯ ನಮ್ಮ ಸಂಸ್ಕರಣಾ ಘಟಕದಲ್ಲಿ ಪ್ಯಾಕ್ ಮಾಡುವುದರಿಂದ ಹಾಲು ತಾಜಾವಾಗಿರುತ್ತದೆ
ಅಮುಲ್ ಮತ್ತು ನಂದಿನಿ ನಡುವೆ ಉತ್ತಮ ಬಾಂಧವ್ಯ: ಎರಡು ಸಹಕಾರಿ ಸಂಘಗಳ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಅಮುಲ್ ಮೊಸರು ಮತ್ತು ಹಾಲಿನ ಉತ್ಪನ್ನಗಳನ್ನು ಇ- ಮತ್ತು ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಇದನ್ನು ಮುಂದಿನ ವಾರ ಪ್ರಾರಂಭಿಸಲಾಗುವುದು. ನಾವು ನಮ್ಮ ಪಾರ್ಲ‌್ರಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂದು ಜಯನ್ ಹೇಳಿದರು.
ಅಮುಲ್ ನ ಮೂರು ಉತ್ಪನ್ನಗಳು ಬೆಂಗಳೂರಿನಲ್ಲಿ ಮಾರಾಟ: ಬೆಂಗಳೂರಿನಲ್ಲಿ ಅಮುಲ್‌ನ ಮೂರು ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಇವುಗಳಲ್ಲಿ ಅಮುಲ್ ಫ್ರೆಶ್ ಟೋನ್ಸ್ ಹಾಲು ಲೀಟರ್‌ಗೆ 54 ರೂ., ಅಮುಲ್ ಗೋಲ್ಡ್ ಮಿಲ್ಕ್ (6% ಕೊಬ್ಬು) ಲೀಟರ್‌ಗೆ 64 ರೂ. ಮತ್ತು ಅಮುಲ್ ಮಸ್ತಿ ದಹಿ 450 ಗ್ರಾಂಗೆ 30 ರೂ. ಆಂಧ್ರಪ್ರದೇಶದ ಮದನಪಲ್ಲಿಯ ನಮ್ಮ ಸಂಸ್ಕರಣಾ ಘಟಕದಲ್ಲಿ ಪ್ಯಾಕ್ ಮಾಡುವುದರಿಂದ ಹಾಲು ತಾಜಾವಾಗಿರುತ್ತದೆ. ಇದು ಬೆಂಗಳೂರಿನಿಂದ ಕೇವಲ 100 ಕಿ.ಮೀ ದೂರದಲ್ಲಿದೆ ಎಂದು ಅಮುಲ್ ನಿರ್ದೇಶಕರು ವಿವರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw