ಸಹೋದರರ ನಡುವೆ ಅಗ್ನಿ ಪರೀಕ್ಷೆ: ಅಣ್ಣನ ಮೇಲೆ ತಮ್ಮನಿಂದ ಪೊಲೀಸರಿಗೆ ದೂರು
ತೆಲಂಗಾಣ: ಅಗ್ನಿ ಪರೀಕ್ಷೆಯಲ್ಲಿ ಸೋತ ಅಣ್ಣ ನನಗೆ ಹಣ ನೀಡದೇ ಮೋಸ ಮಾಡಿದ್ದಾನೆ ಎಂದು ತಮ್ಮ ತನ್ನ ಸಹೋದರನ ಮೇಲೆಯೇ ದೂರು ದಾಖಲಿಸಿರುವ ಘಟನೆ ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ನಡೆದಿದೆ.
ಜೆ.ಗಂಗಾಧರ್ ಎಂಬಾತ ತನ್ನ ಅಣ್ಣ ನಾಗಯ್ಯನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಜೆ.ಗಂಗಾಧರ್ ನ ಪತ್ನಿಯ ಜೊತೆಗೆ ನಾಗಯ್ಯ ಅಕ್ರಮ ಸಂಬಂಧ ಹೊಂದಿರುವ ವಿಚಾರವಾಗಿ ವಿವಾದ ಸೃಷ್ಟಿಯಾಗಿತ್ತು.
ಇವರಿಬ್ಬರ ಗಲಾಟೆಯನ್ನು ನಿಲ್ಲಿಸಲು ಸಾಕಷ್ಟು ರಾಜಿ ಸಂಧಾನಗಳನ್ನು ನಡೆಸಲಾಗಿತ್ತು. ಆದರೂ ಇವರ ಜಗಳ ಮುಗಿದಿರಲಿಲ್ಲ, ಕೊನೆಗೆ ಊರಿನ ಕೆಲವು ಅವಿವೇಕಿಗಳು ಸೇರಿ ಪಂಚಾಯತಿಗೆ ನಡೆಸಿದ್ದು, ಅಣ್ಣ ತಮ್ಮಂದಿರುವ ಅಗ್ನಿ ಪರೀಕ್ಷೆ ನಡೆಸುವಂತೆ ಹೇಳಿದ್ದಾರೆ. ಅಗ್ನಿ ಪರೀಕ್ಷೆಯಲ್ಲಿ ಸೋತವರು 4 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಷರತ್ತು ವಿಧಿಸಿದ್ದರು.
ಅಗ್ನಿ ಪರೀಕ್ಷೆಯಂತೆ, ಬೆಂಕಿಯ ಕೆಂಡದಲ್ಲಿ ಉರಿಯುತ್ತಿರುವ ಕಾದ ಕಬ್ಬಿಣ ಸಲಾಕೆಯನ್ನು ಬರೀ ಗೈಯಿಂದ ಹೊರ ತೆಗೆಯ ಬೇಕಿತ್ತು. ಪತ್ನಿಯ ಮೇಲಿನ ಕೋಪಕ್ಕೆ ಜೆ. ಗಂಗಾಧರ್ ಸಲಾಕೆಯನ್ನು ಹೊರ ತೆಗೆದ. ಆತನ ಕೈಗೆ ಸುಟ್ಟ ಗಾಯಗಳಾದವು. ಆದರೆ, ನಾಗಯ್ಯ ಬೆಂಕಿಯ ಸಲಾಕೆಯನ್ನು ಮುಟ್ಟಲು ಮುಂದಾಗಲೇ ಇಲ್ಲ. ಇದರಿಂದಾಗಿ ಗಂಗಾಧರ್ ವಿಜಯ ಶಾಲಿಯಾಗಿದ್ದ.’
ಇತ್ತ ಅಗ್ನಿ ಪರೀಕ್ಷೆಯಲ್ಲಿ ಸೋತ ನಾಗಯ್ಯ 4 ಲಕ್ಷ ರೂಪಾಯಿ ನೀಡುವಂತೆ ಪಂಚಾಯತ್ ಮುಖ್ಯಸ್ಥರು ತಾಕೀತು ಮಾಡಿದರು. ಆದರೆ, ನಾಗಯ್ಯ ಹಣ ನೀಡಲಿಲ್ಲ. ಇದರಿಂದಾಗಿ ಇದೀಗ ಗಂಗಾಧರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಒಟ್ಟಿನಲ್ಲಿ ಅಣ್ಣ ತಮ್ಮಂದಿರಿಗೆ ಅಗ್ನಿ ಪರೀಕ್ಷೆ ನಡೆಸಿದ ಪಂಚಾಯತ್ ನವರು ಹಾಗೂ ಗ್ರಾಮಸ್ಥರು ಬಿಟ್ಟಿ ಮನರಂಜನೆ ಪಡೆದುಕೊಂಡರು. 5ಜಿ ಯುಗದಲ್ಲಿ ಜನ ಇದ್ದರೂ, ಇನ್ನೂ ಜನರ ಮೌಢ್ಯತೆ ಬದಲಾಗಿಲ್ಲ, ಕಾದ ಕಬ್ಬಿಣದ ಸಲಾಕೆಯನ್ನು ಸತ್ಯವಂತ ಹಿಡಿದರೂ ಸುಡುತ್ತದೆ, ಮೋಸಗಾರ ಹಿಡಿದರೂ ಸುಡುತ್ತದೆ. ಬೆಂಕಿಯ ಗುಣ ಸುಡುವುದೇ ಆಗಿದೆ. ಆದರೆ ಅಗ್ನಿ ಪರೀಕ್ಷೆ ಅನ್ನೋ ಕಾಲ್ಪನಿಕ ವಿಚಾರವನ್ನು ನಿಜವಾಗಿಯೂ ಪರೀಕ್ಷೆ ಮಾಡುವ ಮೌಢ್ಯತೆ ಇನ್ನೂ ನಮ್ಮ ದೇಶದಲ್ಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw