ಲವ್ ಜಿಹಾದ್ ಹೆಸರಿನಲ್ಲಿ ಗೋಬಿ ಅಂಗಡಿ ಮಾಲಿಕನ ಮೇಲೆ ಅಪಪ್ರಚಾರ: ದೂರು ದಾಖಲು

ಚಿಕ್ಕಮಗಳೂರು: ಲವ್ ಜಿಹಾದ್ ಹೆಸರಿನಲ್ಲಿ ತನ್ನ ಮೇಲೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಗೋಬಿ ಅಂಗಡಿ ಮಾಲಿಕರೊಬ್ಬರು ಚಿಕ್ಕಮಗಳೂರು ನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗೋಬಿ ಅಂಗಡಿ ಮಾಲೀಕ ಮಹೇಶ್ ಎಂಬವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದ್ದು, ಕಾಫಿನಾಡಲ್ಲಿ ಲವ್ ಜಿಹಾದ್ ಹಿಂದೂಗಳಿಂದಲೇ ಬೆಂಬಲ, ಹಿಂದೂ ಹುಡುಗಿಯನ್ನ ಮುಸ್ಲಿಂ ಹುಡುಗನ ಜೊತೆ ಮದುವೆ ಮಾಡಿಸಿದ ಹಿಂದೂ ಯುವಕ, ಗೋಬಿ ಅಂಗಡಿ ಮಾಲೀಕ ಮಹೇಶ್ ಎಂಬುವನಿಂದ ಮದುವೆ ಎಂಬಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಾಮ್–ಸಾಗರ್ ಎಂಬ ಇಬ್ಬರು ಯುವಕರ ಮೇಲೆ ಮಹೇಶ್ ದೂರು ನೀಡಿದ್ದಾರೆ. ಅಲ್ಲದೇ ಬಜರಂಗದಳ ಫೇಸ್ಬುಕ್ ಪೇಜ್ ಮೇಲೂ ದೂರು ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7