ಗ್ಯಾಸ್ ಸಿಲಿಂಡರ್ ಸ್ಫೋಟ: 9 ಮಂದಿ ಅಯ್ಯಪ್ಪ ಭಕ್ತರ ಸ್ಥಿತಿ ಚಿಂತಾಜನಕ
ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ನಗರದ ಉಣಕಲ್ ನ ಸಾಯಿ ನಗರದಲ್ಲಿ ನಡೆದಿದೆ.
ವಿನಾಯಕ್ ಭಾರಕೇರ್ (12), ಪ್ರಕಾಶ್ ಬಾರಕೇರ್ (42), ತೇಜಸ್ವರ್ ಸಾತರೆ (26), ಶಂಕರ್ ಚವ್ಹಾಣ್ (29), ಪ್ರವೀಣ್ ಬೀರನೂರ (24), ಮಂಜುನಾಥ್ ವಾಗ್ಮೋಡೆ (22), ನಿಜಲಿಂಗಪ್ಪ ಬೇಪುರಿ (58), ರಾಜು ಮೂಗೇರಿ (21) ಹಾಗೂ ಸಂಜಯ್ ಸವದತ್ತಿ (20) ಗಾಯಾಳುಗಳು ಎಂದು ಗುರುತಿಸಲಾಗಿದೆ.
ಗಾಯಾಳುಗಳ ಪೈಕಿ 8 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಸಾಯಿನಗರದ ಈಶ್ವರ ದೇವಸ್ಥಾನದ ಮೊದಲನೆ ಮಹಡಿಯಲ್ಲಿ 9 ಜನರು ಕೆಳಗೆ ಐವರು ಅಯ್ಯಪ್ಪ ಮಾಲಾಧಾರಿಗಳು ಮಲಗಿದ್ದರು. ಅಯ್ಯಪ್ಪ ಸ್ವಾಮಿಗೆ ಹಚ್ಚಿಟ್ಟ ದೀಪಗಳು ಹಾಗೆಯೇ ಉರಿಯುತ್ತಿದ್ದವು. ಮಧ್ಯರಾತ್ರಿ ವೇಳೆ ಗ್ಯಾಸ್ ಪೈಪ್ ಲೀಕ್ ಆಗಿದೆ. ಈ ವೇಳೆ ಏಕಾಏಕಿ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ.
ಬೆಂಕಿ ವ್ಯಾಪಿಸಿದೊಡೆನೇ ಅರಚಾಟ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬಂದು ಬೆಂಕಿ ನಂದಿಸಿ, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: