ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಿಂದಿನಿಂದ ಕಾಯ್ದೆಗೆ ಬೆಂಬಲ‌ ನೀಡುತ್ತಿದೆ | ಬಿಜೆಪಿ ಶಾಸಕ ಯತ್ನಾಳ್ - Mahanayaka
3:10 PM Friday 20 - September 2024

ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಿಂದಿನಿಂದ ಕಾಯ್ದೆಗೆ ಬೆಂಬಲ‌ ನೀಡುತ್ತಿದೆ | ಬಿಜೆಪಿ ಶಾಸಕ ಯತ್ನಾಳ್

yathnal
22/12/2021

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಕಾಟಾಚಾರಕ್ಕೆ ವಿರೋಧ ಮಾಡುತ್ತಿದೆ. ಹಿಂದಿನಿಂದ ಕಾಯ್ದೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿವಾದಿತ ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿ ಅವರು, ದೇಶದಲ್ಲಿ ಮತಾಂತರ ಅನ್ನೋದು ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗೇ ನಮ್ಮ ಸರ್ಕಾರ ಕಾಯ್ದೆ ತರುತ್ತಿದೆ. ಕಾಟಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಹಿಂದಿನಿಂದ ಕಾಯ್ದೆಗೆ ಬೆಂಬಲ‌ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಹಿಂದೂಗಳನ್ನ ಇಸ್ಲಾಂಗೆ ಮತಾಂತರ ಮಾಡೋದು ನಡೆದಿದೆ. ಅದು ದೇಶದ ಭದ್ರತೆಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್ ಪಾಕಿಸ್ತಾನ ಪಾರ್ಟಿ. ಅವರ ಪಕ್ಷದ ಅಧ್ಯಕ್ಷರೇ ಹಿಂದೂಗಳಲ್ಲ. ಅದರಲ್ಲಿ ಯಾವುದೇ ಧರ್ಮದ ಹೆಸರು ತೆಗೆದುಕೊಂಡಿಲ್ಲ.  ಆಸೆ ಆಮಿಷಗಳನ್ನ ಒಡ್ಡಿ ಮತಾಂತರ ಮಾಡುವವರಿಗೆ ಇದು ಅನ್ವಯವಾಗುತ್ತೆ ಎಂದು ಅವರು ಹೇಳಿದರು.


Provided by

ಕಾಯ್ದೆ ಬಗ್ಗೆ ನಮ್ಮ ಪಕ್ಷದ ನಿಲುವಿತ್ತು, ಅದಕ್ಕೆ ಕಾಯ್ದೆ ಮಂಡನೆಯಾಗಿದೆ. ನಿನ್ನೆ ಬಿಎಸಿ ಮೀಟಿಂಗ್ ನಲ್ಲಿ ಹೇಳಿದ್ದೆವು. ಆಗ  ಕಾಂಗ್ರೆಸ್, ಜೆಡಿಎಸ್ ಮುಖ್ಯ ಸಚೇತಕರಿಗೆ ಮಾಹಿತಿ ನೀಡಿದ್ದೇವೆ. ಅವರು ಹೊರಗಡೆ ಹೋಗಿದ್ದೆ, ಕಾಯ್ದೆ ಪಾಸ್ ಆಗಲಿ ಎಂದಿದ್ದರು. ಕಾಟಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಹಿಂದಿನಿಂದ ಕಾಯ್ದೆಗೆ ಬೆಂಬಲ‌ ನೀಡುತ್ತಿದ್ದಾರೆ ಎಂದು ಹೇಳಿದರು.

ಡಿಕೆಶಿ, ಸಿದ್ದರಾಮಯ್ಯ ಅವರಿಗೂ ಈ ಕಾಯ್ದೆ ಬೇಕು. ಇಲ್ಲದೇ ಹೋದ್ರೆ ಮುಂದೆ ಅವರು ಗೆಲ್ಲಲ್ಲ. ಇಲ್ಲ ಅಂದ್ರೆ ಮತಾಂತರ ಆಗಿ ಚುನಾವಣೆ ಗೆಲ್ಲಬೇಕಾಗುತ್ತೆ. ಇಲ್ಲವಾದರೆ ಅವರ ವಿರುದ್ದ ಜಮೀರ್ ಅಂತವರು ಗೆಲ್ಲಬೇಕಾಗುತ್ತೆ ಎಂದು ಯತ್ನಾಳ್​ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೇಗೆಂದರೆ ಹಾಗೆ ಬದುಕಲು ನಮ್ಮ ದೇಶ ಧರ್ಮಛತ್ರವಲ್ಲ: ಮತಾಂತರ ಕುರಿತು ಆರಗ ಜ್ಞಾನೇಂದ್ರ ಹೇಳಿಕೆ

ಮತಾಂತರ ನಿಷೇಧ ಕಾಯ್ದೆಯ ದುರ್ಬಳಕೆಯ ಸಾಧ್ಯತೆ ಹೆಚ್ಚಿದೆ: ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಂ

ತಂದೆಯ ಚಟ ಬಿಡಿಸಿದ ಮಗಳ ‘ಹಠ’: ಅದ್ದೂರಿ ಮೆರವಣಿಗೆ ಮಾಡಿ ಮಗಳಿಗೆ ಮೊಬೈಲ್ ಕೊಡಿಸಿದ ಬಡ ತಂದೆ

ಸೌದಿ ಅರೇಬಿಯಾ ಮಾದರಿಯಲ್ಲಿ ಭಾರತದಲ್ಲಿಯೂ ತಬ್ಲಿಘಿ ಜಮಾತ್‌ನ್ನು ನಿಷೇಧಿಸಿ: ತೊಗಾಡಿಯಾ

ಬೆಂಗಳೂರು: ಧ್ವನಿವರ್ಧಕಗಳ ತೆರವಿಗೆ ಮುಂದಾದ ಪೊಲೀಸ್ ಇಲಾಖೆ

ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಗೆ ಅಮೇರಿಕಾ ಕಾರಣ: ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಆರೋಪ

ಇತ್ತೀಚಿನ ಸುದ್ದಿ