ಕೊರೊನಾ ಸೋಂಕಿತರ ನೆರವಿಗೆ “ಕಾಂಗ್ರೆಸ್ ಕೇರ್ಸ್” ಆಂಬುಲೆನ್ಸ್ ಗೆ ಚಾಲನೆ
30/04/2021
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಹಾವಳಿ ಮಿತಿ ಮೀರಿದ್ದು ಆಡಳಿತ ಪಕ್ಷ ಬಿಜೆಪಿ ಕೊರೊನಾ ನಿಯಂತ್ರಣಕ್ಕೆ ವಿಫಲವಾಗಿರುವ ನಡುವೆಯೇ ವಿರೋಧ ಪಕ್ಷ ಕಾಂಗ್ರೆಸ್ ಕೊರೊನಾ ವಿರುದ್ಧದ ಹೋರಾಟಕ್ಕೆ ಇಳಿದಿದೆ.
ಬೆಂಗಳೂರಿನಲ್ಲಿ ರೋಗಿಗಳಿಗೆ ಸೂಕ್ತ ಸಮಯಕ್ಕೆ ಬೆಡ್, ಆಕ್ಸಿಜನ್, ಆಂಬುಲೆನ್ಸ್ ಸಿಗದೇ ಪರದಾಡುತ್ತಿದ್ದಾರೆ. ಈ ಹಿನ್ನೆಯಲ್ಲಿ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಕೊರೊನಾ ಸೋಂಕಿತರಿಗೆ ನೆರವು ನೀಡಲು ಕಾಂಗ್ರೆಸ್ ಮುಂದೆ ಬಂದಿದ್ದು, ಸದ್ಯ ಕಾಂಗ್ರೆಸ್ ಕೇರ್ಸ್ ಹೆಸರಿನ ಆಂಬುಲೆನ್ಸ್ ಸೇವೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಂಬುಲೆನ್ಸ್ ಹೇಗೆ ಕಾರ್ಯನಿರರ್ವಹಿಸಲಿದೆ ಮತ್ತು ಕೊವಿಡ್ ಸಮಯದಲ್ಲ ಹೇಗೆ ಜನರಿಗೆ ಉಪಕಾರಿಯಾಗಿರಲಿದೆ ಎಂಬ ಮಾಹಿತಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ನೀಡಿದ್ದಾರೆ.