ಮತ್ತೆ ಸದ್ದು ಮಾಡಿದ “ಕಾಸ್ಟಿಂಗ್ ಕೌಚ್”: ಮಹಿಳೆಯರ ಮೇಲೆ ದೌರ್ಜನ್ಯ ಆಗ್ತಿದೆ ಎಂದ ಕಾಂಗ್ರೆಸ್ ನಾಯಕಿ ಪಕ್ಷದಿಂದಲೇ ಉಚ್ಛಾಟನೆ..!
ಚಲನಚಿತ್ರೋದ್ಯಮದಲ್ಲಿರುವಂತೆಯೇ ಕಾಸ್ಟಿಂಗ್ ಕೌಚ್ ವ್ಯವಸ್ಥೆಯನ್ನು ಕಾಂಗ್ರೆಸ್ ಹೊಂದಿದೆ ಎಂದು ಆರೋಪಿಸಿದ ಕೇರಳದ ಹಿರಿಯ ಕಾಂಗ್ರೆಸ್ ನಾಯಕಿ ಸಿಮಿ ರೋಸ್ಬೆಲ್ ಜಾನ್ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ.
“ಕಾಸ್ಟಿಂಗ್ ಕೌಚ್” ಆರೋಪದ ಬೆನ್ನಲ್ಲೇ ಕೇರಳ ಕಾಂಗ್ರೆಸ್ ಘಟಕವು ತನ್ನ ಹಿರಿಯ ನಾಯಕಿ ಸಿಮಿ ರೋಸ್ಬೆಲ್ ಜಾನ್ ಅವರನ್ನು ಭಾನುವಾರ ಉಚ್ಚಾಟಿಸಿದೆ. ಇದು ಚಲನಚಿತ್ರೋದ್ಯಮದಲ್ಲಿರುವಂತೆಯೇ “ಕಾಸ್ಟಿಂಗ್ ಕೌಚ್” ಹೊಂದಿದೆ ಎಂದು ಆರೋಪಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಮಾಧ್ಯಮಗಳ ಮುಂದೆ ಕಾಂಗ್ರೆಸ್ ಪಕ್ಷವನ್ನು ಅವಮಾನಿಸಿದ್ದಕ್ಕಾಗಿ ಸಿಮಿ ರೋಸ್ಬೆಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಎರ್ನಾಕುಲಂನ ಕಾಂಗ್ರೆಸ್ ನಾಯಕಿ ಸಿಮಿ ಅವರು ಪಕ್ಷದೊಳಗಿನ ಮಹಿಳೆಯರು ಶೋಷಣೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಾದೇಶಿಕ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ರೋಸ್ಬೆಲ್, ಪಕ್ಷದೊಳಗೆ ಅವಕಾಶಗಳನ್ನು ಪಡೆಯಲು ಮಹಿಳಾ ಸದಸ್ಯರು ಹೆಚ್ಚಾಗಿ ಶೋಷಣೆಯನ್ನು ಸಹಿಸಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ.
ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ ರೋಸ್ಬೆಲ್, ಪುರುಷ ನಾಯಕರನ್ನು ‘ಮೆಚ್ಚಿಸುವ’ ಮೂಲಕ ಮಾತ್ರ ಮಹಿಳೆಯರು ಮಹತ್ವದ ಸ್ಥಾನಗಳಿಗೆ ಏರಬಹುದು. ಪ್ರತಿಭೆ ಮತ್ತು ಅನುಭವದ ಅಗತ್ಯವನ್ನು ಕಡೆಗಣಿಸಬಹುದು ಎಂದು ಪ್ರತಿಪಾದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth