ಕೋಮು ದ್ವೇಷದ ಕಾರ್ಟೂನ್: ಬಿಜೆಪಿ ವಿರುದ್ಧ 8 ದೂರು ನೀಡಿದ ಕಾಂಗ್ರೆಸ್ - Mahanayaka
12:14 AM Thursday 21 - November 2024

ಕೋಮು ದ್ವೇಷದ ಕಾರ್ಟೂನ್: ಬಿಜೆಪಿ ವಿರುದ್ಧ 8 ದೂರು ನೀಡಿದ ಕಾಂಗ್ರೆಸ್

12/11/2024

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಂದ ಮೀಸಲಾತಿ ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ ಎಂದು ಸೂಚಿಸುವ ‘ಕೋಮು ದ್ವೇಷದ’ ಕಾರ್ಟೂನ್ ಹಂಚಿರುವುದು ಸೇರಿದಂತೆ ಬಿಜೆಪಿ ವಿರುದ್ದ ಹಲವು ಆರೋಪಗಳನ್ನು ಮಾಡಿರುವ ಕಾಂಗ್ರೆಸ್, ಸೋಮವಾರ ಚುನಾವಣಾ ಆಯೋಗಕ್ಕೆ 8 ದೂರುಗಳನ್ನು ನೀಡಿದೆ. ಎಲ್ಲಾ ದೂರುಗಳನ್ನು ಚುನಾವಣಾ ಆಯೋಗ ಸ್ವೀಕರಿಸಿ ಮಾನ್ಯ ಮಾಡಿದೆ ಎಂದು ವರದಿಯಾಗಿದೆ.

“ನಾವು ಚುನಾವಣಾ ಆಯೋಗದ ಮುಂದೆ ಕೆಲವು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದೇವೆ. ಅವುಗಳ ಬಗ್ಗೆ ಚರ್ಚಿಸಿದ್ದೇವೆ. ಕಾಂಗ್ರೆಸ್ ನೀಡಿರುವ ಎಲ್ಲಾ ಎಂಟು ದೂರುಗಳನ್ನು ಚುನಾವಣಾ ಆಯೋಗವು ಮಾನ್ಯ ಮಾಡಿದೆ” ಎಂದು ದೂರು ನೀಡಿದ ಕಾಂಗ್ರೆಸ್‌ ನಿಯೋಗದ ನೇತೃತ್ವ ವಹಿಸಿದ್ದ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಸೋಮವಾರ ಚುನಾವಣಾ ಆಯೋಗಕ್ಕೆ ಜ್ಞಾಪಕ ಪತ್ರವನ್ನು ಕಳುಹಿಸಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಜಾಹೀರಾತು ಸ್ಪಷ್ಟವಾಗಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಅದರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಜಾರ್ಖಂಡ್ ಬಿಜೆಪಿಯ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ “ಕಾಂಗ್ರೆಸ್ ನೇತೃತ್ವದ ಎಂವಿಎಯ ತುಷ್ಟೀಕರಣದ ಆಟ ಆನ್ ಆಗಿದೆ … ಬುದ್ಧಿವಂತಿಕೆಯಿಂದ ಮತ ಚಲಾಯಿಸಿ, ಮಹಾರಾಷ್ಟ್ರ” ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.




ಬಿಜೆಪಿ ಹಂಚಿಕೊಂಡಿದೆ ಎನ್ನಲಾದ ಕಾರ್ಟೂನ್ ಪೋಸ್ಟ್‌ನಲ್ಲಿ, “ಒಬ್ಬ ವ್ಯಕ್ತಿಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಸದಸ್ಯರನ್ನು ರಿಕ್ಷಾದಿಂದ ಬಲವಂತವಾಗಿ ಹೊರ ಹಾಕುವುದನ್ನು ಮತ್ತು ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಕ್ಕೆ ಸೇರಿದ ವ್ಯಕ್ತಿಗೆ ಸ್ಥಳಾವಕಾಶ ನೀಡುವುದನ್ನು ಕಾರ್ಟೂನ್ ಮೂಲಕ ಚಿತ್ರಿಸಲಾಗಿದೆ” ಎಂದು ಜೈರಾಮ್ ರಮೇಶ್ ತಮ್ಮ ಜ್ಞಾಪಕ ಪತ್ರದಲ್ಲಿ ವಿವರಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ