ಕೊಲೆ ಆರೋಪಿ ಭವ್ಯ ಸ್ವಾಗತ: ಜೈಲಿನಿಂದ ಹೊರ ಬಂದವರೇ ಕಾಂಗ್ರೆಸ್ ಗೆ ಶ್ರೇಷ್ಠರು: ಬಿಜೆಪಿ ಟೀಕೆ
ಬೆಂಗಳೂರು: ಯೋಗೇಶ್ ಗೌಡ ಕೊನೆ ಪ್ರಕರಣದ ಆರೋಪಿ. ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಜಾಮೀನಿನ ಮೇಲೆ ಹೊರ ಬಂದಿದ್ದು, ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ತಿಂಡಿ ತಿನ್ನಿಸಿ ಸ್ವಾಗತಿಸಿದ್ದರು. ಕಾರ್ಯಕರ್ತರಿಂದ ಭಾರೀ ಮೆರವಣಿಗೆ ಕೂಡ ನಡೆದಿತ್ತು.
ಕೊಲೆ ಆರೋಪಿ ಜೈಲಿನಿಂದ ಹೊರ ಬಂದ ವೇಳೆ ಕಾಂಗ್ರೆಸ್ ನೀಡಿದ ಅದ್ದೂರಿ ಸ್ವಾಗತಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷ ನೈತಿಕ ಅಧಃಪತನ ಕಂಡಿದೆ. ಜಾಮೀನು ಪಡೆದು ಜೈಲಿನಿಂದ ಬಂದರೆ, ಯುದ್ಧ ಗೆದ್ದು ಬಂದವರಂತೆ ಸ್ವಾಗತಿಸಲಾಗಿದೆ ಎಂದು ಟೀಕಿಸಿದೆ.
ಕೊಲೆ ಆರೋಪಿಗಳಿಗೆ ಭವ್ಯ ಸ್ವಾಗತ ನೀಡುವುದನ್ನು ಕಾಂಗ್ರೆಸ್ ವರಿಷ್ಠರು ಬೆಂಬಲಿಸುತ್ತದೆಯೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿರುವ ಬಿಜೆಪಿ, ವಿವಾದಾತ್ಮತೆಯೇ ನಾಯಕತ್ವ ಗುಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಬೆನ್ನು ತಟ್ಟಿಕೊಂಡ ಮೇಲೆ ವಿನಯ್ ಕುಲಕರ್ಣಿ ಅವರಂತಹ ಕೊಲೆ ಆರೋಪಿಗೆ ಭವ್ಯ ಸ್ವಾಗತ ಸಿಗುವುದರಲ್ಲಿ ಹೆಚ್ಚುಗಾರಿಗೆ ಇಲ್ಲ ಎಂದು ಕುಟುಕಿದೆ.
ತಿಹಾರ್ ಮತ್ತು ಹಿಂಡಲಗಾ ಜೈಲಿನಿಂದ ಹೊರ ಬಂದವರೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಷ್ಟರು ಎಂದು ಈ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿಯು ಟ್ವೀಟ್ ಮೂಲಕ ಟೀಕಿಸಿದೆ.
ಇನ್ನಷ್ಟು ಸುದ್ದಿಗಳು…
ಹೃದಯ ವಿದ್ರಾವಕ ಘಟನೆ: ಬೀಡಿ ಬ್ರಾಂಚ್ ಗೆ ತೆರಳುತ್ತಿದ್ದ ಮಹಿಳೆಯರಿಗೆ ರೈಲು ಡಿಕ್ಕಿ | ಇಬ್ಬರು ಬಲಿ
ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ… ಡಿಶ್ಯುಂ | ವಿಡಿಯೋ ವೈರಲ್
ಕೊಲೆ ಆರೋಪಿ ವಿನಯ್ ಕುಲಕರ್ಣಿ ಜಾಮೀನಿನಲ್ಲಿ ಬಿಡುಗಡೆ | ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ದಲಿತ ಕೂಲಿ ಕಾರ್ಮಿಕನ ಮೇಲೆ ವಿಷಪೂರಿತ ಆ್ಯಸಿಡ್ ಎರಚಿ, ಮಾರಣಾಂತಿಕ ಹಲ್ಲೆ
ದೇವರಾಜ ಅರಸರ ದುರಂತ ಅಂತ್ಯಕ್ಕೆ ಕಾಂಗ್ರೆಸ್ ಕಾರಣ | ರಘು ಆರ್.ಕೌಟಿಲ್ಯ ಆರೋಪ