ಇಕ್ಕಟ್ಟಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್: ಸಿಎಂ ಆಯ್ಕೆ ಇನ್ನಷ್ಟು ಕಠಿಣ!
ನವದೆಹಲಿ: ನೂತನ ಸಿಎಂ ಆಯ್ಕೆ ವಿಚಾರ ಸತತ ಮೂರನೇ ದಿನವೂ ಕಗ್ಗಂಟಾಗಿಯೇ ಉಳಿದಿದ್ದು, ಇಂದು ಕೂಡ ಸಂದಿಗ್ಧತೆ ಮುಂದುವರಿದಿದೆ. ಸಿಎಂ ಸ್ಥಾನಕ್ಕೆ ಕೇವಲ ಇಬ್ಬರ ಹೆಸರನ್ನು ಮಾತ್ರವೇ ಆಯ್ಕೆ ಮಾಡಿರುವುದರಿಂದ ಗೊಂದಲ ಸೃಷ್ಟಿಯಾಗಿದೆ.
ಉಭಯ ನಾಯಕರ ಜೊತೆಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡೆಸಿದ ಮಾತುಕತೆ ವಿಫಲವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪೈಕಿ ಯಾರನ್ನು ಸಿಎಂ ಮಾಡಬೇಕು? ಒಬ್ಬರನ್ನು ಸಿಎಂ ಮಾಡಿದ್ರೆ ಇನ್ನೊಬ್ಬರ ಸ್ಥಾನ ಏನು ಎನ್ನುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ.
ಮೊದಲು ರಾಹುಲ್ ಗಾಂಧಿ ನಂತರ ಮಲ್ಲಿಕಾರ್ಜುನ ಖರ್ಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಇದಾದ ಬಳಿಕ ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಮೀಟಿಂಗ್ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಇಬ್ಬರ ಮನವೊಲಿಸಲು ಮುಂದಾದರೂ ಪ್ರಯತ್ನಗಳು ವಿಫಲವಾದವು. ಹೀಗಾಗಿ ಇಬ್ಬರು ನಾಯಕರಿಗೂ ದೆಹಲಿಯಲ್ಲೇ ಉಳಿದುಕೊಳ್ಳುವಂತೆ ಖರ್ಗೆ ಸೂಚಿಸಿದ್ದಾರೆ.
ಇನ್ನೂ ಸಿಎಂ ಸ್ಥಾನದ ವಿಚಾರವಾಗಿ ಇಬ್ಬರು ನಾಯಕರು ಕೂಡ ಮಾಧ್ಯಮಗಳಿಗೆ ಯಾವುದೇ ಹೇಳಿಕೆಗಳನ್ನು ನೀಡದೇ ಸ್ಥಳದಿಂದ ತೆರಳಿದರು. ಇಬ್ಬರ ಮುಖದಲ್ಲೂ ಲವಲವಿಕೆ ಇರಲಿಲ್ಲ.
ಇಂದು ಸಿಎಂ ಆಯ್ಕೆ ಬಹುತೇಕ ಆಗಲಿದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿವೆ. ಜೊತೆಗೆ ಇವರಿಬ್ಬರನ್ನು ಬಿಟ್ಟು ಬೇರೆ ಅಭ್ಯರ್ಥಿಗಳನ್ನು ಕೂಡ ಹೈಕಮಾಂಡ್ ದೆಹಲಿಗೆ ಕರೆಸಿದ್ದರೆ, ಸಿಎಂ ಸ್ಥಾನ ಆಯ್ಕೆ ಸುಲಭವಾಗುತ್ತಿತ್ತು ಅನ್ನೋ ಮಾತುಗಳು ಕೂಡ ಇದೀಗ ಕೇಳಿ ಬಂದಿವೆ. ದಲಿತ ಸಿಎಂ ಅನ್ನೋ ಹೆಸರಿನಲ್ಲಿ ಕಾಂಗ್ರೆಸ್ ಜನರ ಕಿವಿಗೆ ಹೂವಿಡುವ ಕೆಲಸ ಯಶಸ್ವಿ ಮಾಡಿದೆ ಅನ್ನೋ ವಿಶ್ಲೇಷಣೆಗಳು ಕೂಡ ಇದೀಗ ಗಟ್ಟಿ ಧ್ವನಿಯಲ್ಲಿ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw