ಶಾಕಿಂಗ್ ನ್ಯೂಸ್: ಅಜಾತಶತ್ರು ಕಾಂಗ್ರೆಸ್ ನಾಯಕ ಧ್ರುವನಾರಾಯಣ ಹೃದಯಾಘಾತದಿಂದ ನಿಧನ - Mahanayaka

ಶಾಕಿಂಗ್ ನ್ಯೂಸ್: ಅಜಾತಶತ್ರು ಕಾಂಗ್ರೆಸ್ ನಾಯಕ ಧ್ರುವನಾರಾಯಣ ಹೃದಯಾಘಾತದಿಂದ ನಿಧನ

dhruvanarayan
11/03/2023

ಮೈಸೂರು:  ಅಜಾತಶತ್ರು ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಮಾಜಿ ಸಂಸದ ಆರ್‌. ಧ್ರುವನಾರಾಯಣ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಕೇಂದ್ರ ಮಾಜಿ ಸಚಿವರಾಗಿದ್ದ ದಿ.ರಾಜಶೇಖರ ಮೂರ್ತಿ ಅವರ ಪಟ್ಟ ಶಿಷ್ಯರಾಗಿರುವ ಇವರು ರಾಜಶೇಖರ ಮೂರ್ತಿಯವರ ಪ್ರೇರಣೆ ಹಾಗೂ ಸೂಚನೆ‌ ಮೇರೆಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

1999 ರಲ್ಲಿ ಎ.ಆರ್.ಕೃಷ್ಣಮೂರ್ತಿ ವಿರುದ್ದ ಬಿಜೆಪಿ ಅಭ್ಯರ್ಥಿಯಾಗಿ ಸೋಲನುಭವಿಸಿದ್ದರು. ನಂತರ 2004 ರಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕೇವಲ ಒಂದು ಮತದ ಅಂತರದಲ್ಲಿ ಗೆಲುವು ಮೂಲಕ ದೇಶದ ಗಮನ ಸೆಳೆದಿದ್ದರು.


Provided by

ಮೊದಲ ಬಾರಿ 54 ಹಳ್ಳಿಗಳಿಗೆ ನದಿಯಿಂದ ಕುಡಿಯುವ ನೀರು ತಂದ ಶಾಸಕ ಇವರಾಗಿದ್ದಾರೆ. ನಂತರ ಸಂತೇಮರಳ್ಳಿ ಕ್ಷೇತ್ರ ವಿಂಗಡನೆ ಹಿನ್ನೆಲೆ 2008 ರಲ್ಲಿ ಕೊಳ್ಳೇಗಾಲದಿಂದ ಸ್ಪರ್ಧೆ ಪ್ರಚಂಡ ಗೆಲುವು ಸಾಧಿಸಿದ್ದರು. ಸತತ ಜನ ಮನ್ನಣೆ ಪಡೆದ ಶಾಸಕ, ಹಲವು ಯೋಜನೆಗಳನ್ನ ಕ್ಷೇತ್ರಕ್ಕೆ ತಂದ ಹೆಗ್ಗಳಿಕೆ ಇವರದ್ದಾಗಿದೆ.

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. 2009 ರಲ್ಲಿ ಮೊದಲ ಬಾರಿಗೆ ಸ್ಪರ್ಧೆ ‌ಮಾಡಿ ದೃವನಾರಾಯಣಗೆ ಗೆಲುವು ದೊರಕಿತ್ತು. ನಂತರ 2014 ರಲ್ಲಿ ಮತ್ತೆ ಸ್ಪರ್ಧೆ ಒಂದುವರೆ ಲಕ್ಷಕ್ಕೂ ಹೆಚ್ಚು ಮತ ಅಂತರದಲ್ಲಿ ಗೆದ್ದಿದ್ದರು.

ಎರಡು ಬಾರಿ ಎಂಪಿಯಾಗಿದ್ದ ದೃವ, ಕರ್ನಾಟಕದಲ್ಲೇ ನಂ1 ಎಂಪಿಯಾಗಿದ್ದ ಹೆಗ್ಗಳಿಕೆ ಪಡೆದಿದ್ದರು. ಸದಾ ಸಂಸತ್ ನಲ್ಲಿ‌ ಎಂಟ್ರಿ, ಚರ್ಚೆ, ಕೇಂದ್ರದಿಂದ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು. ಚಾಮರಾಜನಗರ ಜಿಲ್ಲೆಗೆ ಬಹಳಷ್ಟು ಅಭಿವೃದ್ಧಿ ಪಡಿಸಿದ್ದ ಎಂ.ಪಿ.ದೃವನಾರಾಯಣ ಮಾದರಿಯಾಗಿದ್ದರು.

ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಕೇಂದ್ರೀಯ ವಿದ್ಯಾಲಯ, ಆದರ್ಶ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ ತರುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿದ್ದ ದೃವನಾರಾಯಣ, ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೃಷಿಯ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು.

2018 ರಲ್ಲಿ ಈ ಭಾಗದ ದಲಿತ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ 1600 ಮತಗಳ ಅಂತರದಿಂದ ಸೋಲನುಭವಿಸಿದ್ದರು. ನಂತರ ಪಲಿತಾಂಶದ ಮರು ದಿನವೇ ರಾಜಕೀಯ ಸಭೆಗಳಲ್ಲಿ ಭಾಗಿಯಾಗುವ ಮೂಲಕ ಬೆಂಬಲಿಗರಿಗೆ ಹಾಗೂ ಪಕ್ಷಕ್ಕೆ ಉತ್ಸಾಹ ತುಂಬಿದ್ದರು.

24 ಗಂಟೆ ರಾಜಕಾರಣದಲ್ಲೇ ನಿರತರಾಗಿದ್ದ ದೃವ, ಪತ್ನಿಯ ಅನಾರೋಗ್ಯ ಕೂಡಾ ಲೆಕ್ಕಿಸದೇ ದಿನನಿತ್ಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಒಂದು ಕಡೆ ರಾಜಕೀಯ ಮತ್ತೊಂದಡೆ ಪತ್ನಿಯ ಅನಾರೋಗ್ಯವನ್ನು ಎದುರಿಸುತ್ತಿದ್ದರು.  ಈ ಬಾರಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಧ್ರುವನಾರಾಯಣ್  ಸಿದ್ಧತೆ ನಡೆಸಿದ್ದರು.
ನಾಳೆ ಚಾಮರಾಜನಗರ ತಾಲೂಕಿನ ಗ್ರಾಮ ಹೆಗ್ಗವಾಡಿಯ ತೋಟದಲ್ಲಿ ಅಂತ್ಯಕ್ರಿಯೆಗೆ ನಡೆಸಲು ಕುಟುಂಬ ನಿರ್ಧರಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ