ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಕಾಂಗ್ರೆಸ್ ಮುಖಂಡೆಯ ಮೇಲೆ ಗುಂಡಿನ ದಾಳಿ
ಉತ್ತರಪ್ರದೇಶ: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆದರೆ, ಸದ್ಯ ಪ್ರತಿಭಟನೆ ನಡೆಸುವುದು ಜೀವಕ್ಕೆ ಅಪಾಯಕಾರಿ ಎನ್ನುವ ಭೀತಿ ಸೃಷ್ಟಿಯಾಗುವಂತಹ ಘಟನೆಗಳು ನಡೆಯುತ್ತಿದೆ.
ಹೌದು…! ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದ ಕಾಂಗ್ರೆಸ್ ನಾಯಕಿ ರೀಟಾ ಯಾದವ್ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಿದ್ದ ವೇಳೆ ಕಾಂಗ್ರೆಸ್ ಮುಖಂಡೆ ರೀಟಾ ಯಾದವ್ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಈ ಘಟನೆಯ ಬಳಿಕ ಸೋಮವಾರ ಸುಲ್ತಾನ್ ಪುರದಿಂದ ತಮ್ಮ ಮನೆಗೆ ಅವರು ತೆರಳುತ್ತಿದ್ದ ವೇಳೆ ಲಂಬುವಾ ಪ್ರದೇಶದಲ್ಲಿ ರೀಟಾ ಅವರ ಕಾರನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗುಂಡು ಹಾರಿಸಿದ್ದು, ಅವರ ಕಾಲಿಗೆ ಗುಂಡು ತಗಲಿದೆ. ತಕ್ಷಣವೇ ಅವರನ್ನು ಸಿಎಚ್ ಸಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸುಲ್ತಾನ್ ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಇತ್ತೀಚೆಗೆ ಎಸ್ ಪಿ ತೊರೆದು ಕಾಂಗ್ರೆಸ್ ಗೆ ಸೇರಿದ್ದ ರೀಟಾ ಯಾದವ್ ಅವರು ಪಕ್ಷ ಪೋಸ್ಟರ್ ಬ್ಯಾನರ್ ತಯಾರಿಸಲು ಸುಲ್ತಾನ್ ಪುರಕ್ಕೆ ತೆರಳಿದ್ದರು. ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಅವರ ಹತ್ಯೆಗೆ ಯತ್ನಿಸಲಾಗಿದೆ. ಗುಂಡಿನ ದಾಳಿಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಘಟನೆಯ ಮಾಹಿತಿ ಪಡೆದು ಪೊಲೀಸರ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ ಸತೀಶ್ ಚಂದ್ ಶುಕ್ಲಾ, ಸ್ಥಳ ತನಿಖೆ ನಡೆಸಿದ್ದು, ಬಳಿಕ ರೀಟಾ ಯಾದವ್ ಅವರಿಂದ ಹೇಳಿಕೆ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗರ್ಭಿಣಿ ಪತ್ನಿ ಮನೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಇನ್ಸ್ ಪೆಕ್ಟರ್
ಫೇಸ್ ಬುಕ್ ನಲ್ಲಿ ಪರಿಚಯ: 15 ವರ್ಷದ ಬಾಲಕನನ್ನು ಮದುವೆಯಾದ 22ರ ಯುವತಿ
3 ಸಾವಿರ ಲೀಟರ್ ಮದ್ಯವನ್ನು ಕಾಲುವೆಗೆ ಸುರಿದ ಅಫ್ಘಾನಿಸ್ತಾನ
ಮಹಿಳೆಯರ ಅಶ್ಲೀಲ ಚಿತ್ರ ಹರಾಜು ಹಾಕುತ್ತಿದ್ದ ‘ಬುಲ್ಲಿ ಬಾಯ್ಸ್ ಆ್ಯಪ್’ ನಿಷೇಧ
ಅಶ್ವತ್ಥ ನಾರಾಯಣನಿಗೂ ರಾಮನಗರಕ್ಕೂ ಏನು ಸಂಬಂಧ? | ಡಿ.ಕೆ.ಶಿವಕುಮಾರ್ ಪ್ರಶ್ನೆ