ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಬಜರಂಗದಳ ನಿಷೇಧ ಸೇರಿದಂತೆ ಮಹತ್ತರ ಯೋಜನೆಗಳ ಪಟ್ಟಿ ಪ್ರಣಾಳಿಕೆಯಲ್ಲಿ
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆ ಬಿಜೆಪಿ ಬಳಿಕ ನಿನ್ನೆ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ ಐ ನಿಷೇಧ ಮಾಡುವುದಾಗಿ ಹೇಳಿದೆ. ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ–ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ರಾಜ್ಯದ ಜನತೆಗೆ ಭಾರೀ ಆಶ್ವಾಸನೆಗಳನ್ನು ನೀಡಲಾಗಿದೆ. 200 ಯೂನಿಟ್ ಉಚಿತ ವಿದ್ಯುತ್ ಯುವಕರಿಗೆ 3 ಸಾವಿರ ನಿರುದ್ಯೋಗ ಭತ್ಯೆ, ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಸೇರಿದಂತೆ ಪ್ರಮುಖ ಆಶ್ವಾಸನೆಗಳನ್ನು ಈ ಪ್ರಣಾಳಿಕೆ ಒಳಗೊಂಡಿದೆ.
200 ಯೂನಿಟ್ ಉಚಿತ ವಿದ್ಯುತ್
ಯುವನಿಧಿ ಅಡಿಯಲ್ಲಿ ಯುವಕರಿಗೆ 3,000 ನಿರುದ್ಯೋಗ ಭತ್ಯೆ ಬಿಸಿಯೂಟ ನೌಕರರ ಮಾಸಿಕ ಗೌರವಧನ 6 ಸಾವಿರ ರೂ.
ಡಿಪ್ಲಮೋ ಪದವೀಧರರಿಗೆ 1,500 ಸಹಾಯ ಧನ
ಅನ್ನ ಭಾಗ್ಯ ಯೋಜನೆಯಡಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ
ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ 2 ಸಾವಿರ ರೂಪಾಯಿ
ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ
ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರಿಂದ 10 ಸಾವಿರಕ್ಕೆ ಏರಿಕೆ
ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ,ಸಸ್ಯ ಶಾಮಲೆ ಹೆಸರಿನಲ್ಲಿ ರೈತ ಸ್ನೇಹಿ ಕಾರ್ಯಕ್ರಮ
ಪ್ರತಿ ವಿಭಾಗಕ್ಕೆ ಕೃಷಿ ಬೆಲೆ ಆಯೋಗ ಸ್ಥಾಪನೆ
ಗ್ರಾಮೀಣ ಭಾಗದಲ್ಲಿ 8 ಗಂಟೆ ವಿದ್ಯುತ್ ಪೂರೈಕೆ
ರೈತರಿಗೆ ಬಡ್ಡಿ ರಹಿತ 10 ಲಕ್ಷ ಸಾಲಸೌಲಭ್ಯ
ಕೃಷಿತೋಟಗಾರಿಕೆ ಉತ್ಪನ್ನಗಳಿಗೆ ಬೆಲೆ ನಿಗದಿ
ಸ್ವಾಮಿನಾಥನ್ ವರದಿಯ ಅನುಷ್ಠಾನ
ಕೃಷಿ ಉತ್ಪನ್ನ ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಸೇವೆ
ಪ್ರತಿ ಕ್ಷೇತ್ರದಲ್ಲಿ ಶೀತಲೀಕರಣ ಘಟಕ ಸ್ಥಾಪನೆ
ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ಧು
ಎಪಿಎಂಸಿ ಕಾಯ್ದೆ ರದ್ಧು ಮಾಡುವ ಭರವಸೆ
ರೈತರ ಮೇಲಿನ ಎಲ್ಲಾ ಕೇಸ್ ವಾಪಸ್
ಪ್ರತಿ ಜಿಲ್ಲೆಗೆ ಒಂದು ರೈತ ಮಾಲ್ ಆರಂಭ
ಸಾವಯವ ಕೃಷಿ ಯೋಜನೆಗೆ 2,500 ಕೋಟಿ ಹೂಡಿಕೆ
ನೇಗಿಲ ತುಡಿತ ಹೆಸರಿನಲ್ಲಿ ಮಂಡಳಿ ಸ್ಥಾಪನೆ
ಹನಿ,ತುಂತುರು ನೀರಾವರಿಗೆ 100 ರಷ್ಟು ಸಬ್ಸಿಡಿ
ಸೌರ ಪಂಪ್ ಸೆಟ್ ಯೋಜನೆಗೆ ಸಬ್ಸಿಡಿ
ಬೀದರ್, ಕಲಬುರಗಿಯಲ್ಲಿ ಕೃಷಿ ಉತ್ಪನ್ನ ಸಂಶೋಧನಾ ಸಂಸ್ಥೆ, ಪೋಲಿಸ್ ಇಲಾಖೆಯಲ್ಲಿ ಶೇ.33 ರಷ್ಟು ಮಹಿಳಾ ಪೊಲೀಸ್ ಭರ್ತಿ ಮಾಡುವ ಭರವಸೆ ನೀಡಲಾಗಿದೆ. ಶೇ.1 ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ ನೀಡುವ ಬಗ್ಗೆ ಹೇಳಲಾಗಿದೆ. ರಾತ್ರಿ ಪಾಳಿ ಮಾಡಿದರೆ 5 ಸಾವಿರ ವಿಶೇಷ ಭತ್ಯೆ, ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ, ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಕಲ್ಯಾಣ ಕೇಂದ್ರ ಸ್ಥಾಪನೆ, ನಾಲ್ಕು ವರ್ಷದೊಳಗೆ ಪೊಲೀಸ್ ಸಿಬ್ಬಂದಿಗೆ ವಸತಿ ನಿರ್ಮಾಣ ಹೊಸ ಠಾಣೆಗಳ ನಿರ್ಮಾಣ,ಹಳೆ ಠಾಣೆ ನವೀಕರಣದ ಭರವಸೆ, ಪ್ರತಿ ಜಿಲ್ಲೆಯಲ್ಲಿ ಸುಸಜ್ಜಿತ ಸೈಬರ್ ಠಾಣೆಯ ಭರವಸೆ ನೀಡಲಾಗಿದೆ.
ಗ್ರಾ.ಪಂ ವ್ಯಾಪ್ತಿಯಲ್ಲಿ ಯಾಂತ್ರೀಕರಣ ಸೌಲಭ್ಯ, ಸ್ವಸಹಾಯ ಗುಂಪುಗಳಿಗೆ 3 ಲಕ್ಷ ಬಡ್ಡಿರಹಿತ ಸಾಲ, ಪ್ರತ್ಯೇಕ ಕೃಷಿ ಕೋಶ ಕೇಂದ್ರ ಸ್ಥಾಪನೆ, ಗದಗದಲ್ಲಿ ಹತ್ತಿ ರಫ್ತು ಸಂಸ್ಕರಣ ಕೇಂದ್ರ, ಸಿಂಧನೂರಿನಲ್ಲಿ ಅಕ್ಕಿ ಸಂಸ್ಕರಣ ಕೇಂದ್ರ, ಬೆಳಗಾವಿ,ಬಾಗಲಕೋಟೆ,ಮಂಡ್ಯದಲ್ಲಿ ಎಥೆನಾಲ್ ಘಟಕ, ಕೊಡಗು,ಚಿಕ್ಕಮಗಳೂರಿನಲ್ಲಿ ಕಾಳು ಮೆಣಸು ಸಂಸ್ಕರಣಾ ಘಟಕ, ದೊಡ್ಡಬಳ್ಳಾಪುರದಲ್ಲಿ ಹೂ ಸಂಶೋಧನಾ ಕೇಂದ್ರ
ಜೇನು ಸಾಕಾಣಿಕೆಗೆ 50 ಕೋಟಿ, ರಬ್ಬರ್ ಕೃಷಿಗೆ 25 ಕೋಟಿ ಪ್ಯಾಕೇಜ್, ಮಲೆನಾಡು ರೈತರಿಗೆ ಸಾಗುವಳಿ ಪತ್ರ ನೀಡಿಕೆ
ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ, ಕೋಲಾರ,ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣೆ ಕೇಂದ್ರ, ಕಾಫಿ ಕರ್ನಾಟಕ ಬ್ರಾಂಡ್ ಸೃಷ್ಟಿ
ರೇಷ್ಮೆ ರೀಲರ್ ಗಳಿಗೆ 3 ಲಕ್ಷ ಬಡ್ಡಿ ರಹಿತ ಸಾಲದ ಬಗ್ಗೆ ಹೇಳಲಾಗಿದೆ.
ಮಿಷನ್ ಕ್ಷೀರ ಕ್ರಾಂತಿ ಕಾರ್ಯಕ್ರಮ, ಹಾಲಿನ ಸಬ್ಸಿಡಿ 5 ರಿಂದ 7 ರೂ. ಗೆ ಹೆಚ್ಚಳ, ಋಣ ಮುಕ್ತ ಕುರಿಗಾಹಿ ಯೋಜನೆ ಜಾರಿ ಬಗ್ಗೆ ಭರವಸೆ ನೀಡಲಾಗಿದೆ.
ಸರ್ವ ಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಬಿಡುಗಡೆ ಮಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಜಿ. ಪರಮೇಶ್ವರ, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw