ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ: ಗುವಾಹಟಿಯಲ್ಲಿ ಕಾಂಗ್ರೆಸ್ ಶಾಸಕ ಅರೆಸ್ಟ್
08/11/2023
ಹಿಂದೂ ಸಮುದಾಯ ಮತ್ತು ಪುರೋಹಿತರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಶಾಸಕ ಅಫ್ತಾಬ್ ಉದ್ದೀನ್ ಮೊಲ್ಲಾ ಅವರನ್ನು ಬಂಧಿಸಲಾಗಿದೆ. ಗುವಾಹಟಿಯ ಶಾಸಕ ವಾಝೆದ್ ಅಲಿ ಚೌಧರಿ ಅವರ ನಿವಾಸದಿಂದ ಮೊಲ್ಲಾ ಅವರನ್ನು ಬಂಧಿಸಲಾಗಿದೆ.
ನವೆಂಬರ್ 5 ರಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯು ಮೊಲ್ಲಾ ಅವರ ಹೇಳಿಕೆಗೆ ಶೋಕಾಸ್ ನೋಟಿಸ್ ನೀಡಿತ್ತು. “ಎಲ್ಲಿ ಹಿಂದೂಗಳು ಇರುತ್ತಾರೋ ಅಲ್ಲಿ ತಪ್ಪುಗಳು ನಡೆಯುತ್ತವೆ. ಮಂದಿರದ ಅರ್ಚಕ ಮತ್ತು ನಾಮ್ ಘರ್ ನ ಉಸ್ತುವಾರಿಗಳು ಅತ್ಯಾಚಾರಿಗಳು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ನವೆಂಬರ್ 4 ರಂದು ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಈ ಹೇಳಿಕೆ ನೀಡಿದ್ದರು. ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಸೆಕ್ಷನ್ 295 (ಎ) / 153 ಎ (1) (ಬಿ) / 505 (2) ಅಡಿಯಲ್ಲಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಮೊಲ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.